ಉದಯವಾಹಿನಿ, ಮುಂಬೈ, : ಭಾರತದಲ್ಲಿ ಕ್ಯಾಂಪಸ್ ತೆರೆಯಲು ಯುಕೆಯ 9 ವಿಶ್ವವಿದ್ಯಾಲಯಗಳು ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶೈಕ್ಷಣಿಕ ಸಂಬಂಧವನ್ನು ಬಲಪಡಿಸಲು ಐತಿಹಾಸಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಇಂದು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಜತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ.
ಸೌತ್ಹ್ಯಾಂಪ್ಟನ್ ಯೂನಿವರ್ಸಿಟಿ ಸೇರಿ 9 ಪ್ರಮುಖ ಬ್ರಿಟಿಷ್ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್‌ಗಳನ್ನು ತೆಗೆಯುವುದಾಗಿ ಘೋಷಿಸಿದರು. ಸೌತ್ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಗುರುಗ್ರಾಮ ಕ್ಯಾಂಪಸ್ ಅನ್ನು ಈಗಾಗಲೇ ಉದ್ಘಾಟಿಸಲಾಗಿದ್ದು, ವಿದ್ಯಾರ್ಥಿಗಳ ಬ್ಯಾಚ್ ಆರಂಭಗೊಂಡಿದೆ. ಸಮಗ್ರ ಆರ್ಥಿಕ ವ್ಯಾಪಾರ ಒಪ್ಪಂದ (CETA)ಕ್ಕೆ ಸಹಿ ಹಾಕಿದ ನಂತರ ಭಾರತ-ಯುಕೆಯ ದ್ವಿಪಕ್ಷೀಯ ಸಂಬಂಧಗಳು ಹೊಸ ಎತ್ತರವನ್ನು ತಲುಪುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ಸ್ಟಾರ್ಮರ್ ಅವರ ನೇತೃತ್ವದಲ್ಲಿ, ಭಾರತ ಮತ್ತು ಯುಕೆ ಸಂಬಂಧಗಳು ಗಮನಾರ್ಹ ಪ್ರಗತಿಯನ್ನು ಕಂಡಿವೆ. ಈ ವರ್ಷದ ಜುಲೈನಲ್ಲಿ, ನಾನು ಯುಕೆಗೆ ಭೇಟಿ ನೀಡಿದ ಸಮಯದಲ್ಲಿ, ನಾವು ಐತಿಹಾಸಿಕ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ (ಸಿಇಟಿಎ) ಸಹಿ ಹಾಕಿದ್ದೇವೆ ಎಂದು ಅವರು ಹೇಳಿದರು.
ಇಂದು, ಪ್ರಧಾನಿ ಸ್ಟಾರ್ಮರ್ ಜೊತೆಗೆ, ಶಿಕ್ಷಣ ವಲಯದಿಂದ ಇದುವರೆಗಿನ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ನಿಯೋಗ. ಯುಕೆಯ ಒಂಬತ್ತು ವಿಶ್ವವಿದ್ಯಾಲಯಗಳು ಈಗ ಭಾರತದಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ತೆರೆಯಲು ಸಜ್ಜಾಗಿರುವುದು ಬಹಳ ಸಂತೋಷದ ವಿಷಯ ಎಂದು ಪ್ರಧಾನಿ ಮೋದಿ ಹೇಳಿದರು.
