ಉದಯವಾಹಿನಿ, ಐಸಿಸಿ ಮಹಿಳಾ ವಿಶ್ವಕಪ್ 2025 ರ ಟೂರ್ನಿ ಭಾರೀ ಕುತೂಹಲ ಮೂಡಿಸುತ್ತಿದೆ. ಟೂರ್ನಿಯ 9ನೇ ಪಂದ್ಯ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಿತು. ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನ ತಂಡವನ್ನು ಆಸ್ಟ್ರೇಲಿಯಾ ಸೋಲಿಸಿತು. ಈ ಮೂಲಕ ಆಸ್ಟ್ರೇಲಿಯಾ ತಂಡ 103 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಮೇಲೆ ಪಾಕಿಸ್ತಾನ ಬೌಲರ್ಸ್ ಹಿಡಿತ ಸಾಧಿಸಿದರು. ಆದರೆ, ಪಾಕಿಸ್ತಾನದ ಬ್ಯಾಟಿಂಗ್ ವಿಭಾಗದ ವೈಫಲ್ಯ ತಂಡವನ್ನು ಸೋಲಿಸಿತು.
ಆರಂಭದಲ್ಲಿ ಆಸ್ಟ್ರೇಲಿಯಾ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಡಬಲ್ ಸೆಂಚುರಿಯನ್ನು ಹೋಲುವ ಇನ್ನಿಂಗ್ಸ್ ಆಡಿದ ಬೆತ್ ಮೂನಿ ಪಂದ್ಯದ ದಿಕ್ಕನ್ನು ಬದಲಾಯಿಸಿದರು. ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಆದರೆ ಆಸ್ಟ್ರೇಲಿಯಾ ವನಿತೆಯರು ಮೊದಲು ಬ್ಯಾಟಿಂಗ್‌ನಲ್ಲಿ ಎಡವಿದರು.
ಆಸ್ಟ್ರೇಲಿಯಾ ತಂಡದ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದರು. ಅಲಿಸಾ ಹೀಲಿ ಮತ್ತು ಎಲಿಸ್ ಪೆರ್ರಿಯಂತಹ ಸ್ಟಾರ್ ಬ್ಯಾಟರ್ಸ್ ಕೂಡ ಪಾಕಿಸ್ತಾನ ಬೌಲರ್ಸ್ ಎದುರು ಮಂಕಾದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಬೆತ್ ಮೂನಿ ತಮ್ಮ ವಿಕೆಟ್ ಅನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಇನ್ನೊಂದು ತುದಿಯಲ್ಲಿ ವಿಕೆಟ್ ಬೀಳುತ್ತಿರುವುದು ಬೆತ್ ಮೂನಿ ಅವರಿಗೆ ಕಿರಿಕಿರಿ ಮಾಡಿತು. 5, 6, 7 ಮತ್ತು 8 ನೇ ಕ್ರಮಾಂಕದಲ್ಲಿ ಬ್ಯಾಟರ್ಸ್ 10 ರನ್‌ಗಳನ್ನು ಗಳಿಸಲು ಸಹ ಸಾಧ್ಯವಾಗಲಿಲ್ಲ. 9 ನೇ ಕ್ರಮಾಂಕದ ಬ್ಯಾಟರ್ ಕೂಡ 11 ರನ್‌ಗಳಿಗೆ ಔಟಾದರು. ಸತತ ನಾಲ್ಕು ವಿಕೆಟ್‌ಗಳ ನಂತರ ಕಾಂಗರೂ ಪಡೆ 100 ರನ್ ಗಳಿಸುವುದು ಕಷ್ಟಕರವೆಂದು ತೋರುತ್ತದೆ. ಆದರೆ ಬೆತ್ ಮೂನಿ ಪಂದ್ಯವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲಿಲ್ಲ.
