ಉದಯವಾಹಿನಿ, ನವದೆಹಲಿ: ಅಡುಗೆ ಸಲಕರಣೆ ತಯಾರಕ ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್‌ನ ನಿವೃತ್ತ ಅಧ್ಯಕ್ಷ ಟಿಟಿ ಜಗನ್ನಾಥನ್ ಗುರುವಾರ ತಡರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಜಗನ್ನಾಥನ್‌ ಅವರು ಟಿಟಿಕೆ ಗ್ರೂಪ್‌ನ ಸ್ಥಾಪಕ ಮತ್ತು ಕೇಂದ್ರದ ಮಾಜಿ ಹಣಕಾಸು ಸಚಿವ ಟಿಟಿ ಕೃಷ್ಣಮಾಚಾರಿ ಅವರ ಸೋದರಳಿಯ. ಜಗನ್ನಾಥನ್ ಅವರನ್ನು ಹೆಚ್ಚಾಗಿ ‘ದಿ ಕಿಚನ್ ಮೊಗಲ್’ ಎಂದು ಕರೆಯಲಾಗುತ್ತದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕಂಪನಿಯು, ಜಗನ್ನಾಥನ್‌ ಅವರ ಹಠಾತ್ ಮತ್ತು ಅನಿರೀಕ್ಷಿತ ನಿಧನವು ಕಂಪನಿಗೆ ತುಂಬಲಾರದ ನಷ್ಟವಾಗಿದೆ. ಕಂಪನಿಯ ಎಲ್ಲಾ ನಿರ್ದೇಶಕರು ಮತ್ತು ಉದ್ಯೋಗಿಗಳು ಅವರ ಕುಟುಂಬಕ್ಕೆ ತೀವ್ರ ದುಃಖ ಮತ್ತು ಸಂತಾಪವನ್ನು ವ್ಯಕ್ತಪಡಿಸುತ್ತಾರೆ ಎಂದು ತಿಳಿಸಿದೆ.ಜಗನ್ನಾಥನ್ ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ 42,41,868 ಈಕ್ವಿಟಿ ಷೇರುಗಳನ್ನು ಹೊಂದಿದ್ದು, ಇದು ಟಿಟಿಕೆ ಪ್ರೆಸ್ಟೀಜ್‌ನ ಒಟ್ಟು ಷೇರುಗಳ 3.10% ರಷ್ಟಿದೆ. ಇದರ ಜೊತೆಗೆ, ಅವರು ಮೆಸರ್ಸ್ ಟಿ ಟಿ ಕೃಷ್ಣಮಾಚಾರಿ & ಕಂಪನಿಯಲ್ಲಿ 3% ಪಾಲನ್ನು ಹೊಂದಿದ್ದಾರೆ. ಇದು 8,27,67,238 ಈಕ್ವಿಟಿ ಷೇರುಗಳನ್ನು ಹೊಂದಿದೆ. ಇದು ಕಂಪನಿಯ 60.44% ರಷ್ಟಿದೆ.
ಟಿಟಿ ಜಗನ್ನಾಥನ್ ಅವರು ಅನುಭವಿ ಕೈಗಾರಿಕೋದ್ಯಮಿ, ಟಿಟಿಕೆ ಪ್ರೆಸ್ಟೀಜ್ (Prestige) ಅನ್ನು ಭಾರತದ ಪ್ರಮುಖ ಅಡುಗೆ ಮತ್ತು ಗೃಹೋಪಯೋಗಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವವು ಹಲವಾರು ದಶಕಗಳ ಕಾಲ ಮುಂದುವರಿದಿತ್ತು. ಈ ಅವಧಿಯಲ್ಲಿ ಕಂಪನಿಯು ತನ್ನ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಿತು. ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿತು.

Leave a Reply

Your email address will not be published. Required fields are marked *

error: Content is protected !!