ಉದಯವಾಹಿನಿ,ಮಂಗಳೂರು: ಐದು ವರ್ಷಗಳಿಂದ ಕುಂಟುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗಳ ಸಂಕೀರ್ಣ ಕಾಮಗಾರಿ ಮುಗಿಸಲು 32 ಕೋಟಿ ರೂ. ಮೊತ್ತದ ಹೊಸ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಿದ್ದು, ಬಜೆಟ್ ಅಥವಾ ಸಂಪುಟದ ಅನುಮೋದನೆಯ ನಿರೀಕ್ಷೆಯಲ್ಲಿದೆ. ಪಡೀಲ್‌ನಲ್ಲಿ ಪ್ರಥಮ ಹಂತದಲ್ಲಿಅರ್ಧ ಕಾಮಗಾರಿ ಮುಗಿಸಿದ ಬಳಿಕ ಎರಡನೇ ಹಂತದಲ್ಲಿ 29 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ, ಸರಕಾರಕ್ಕೆ ಸಲ್ಲಿಸಲಾಗಿತ್ತು. ಎರಡು ವರ್ಷ ಸಮೀಪಿಸಿದರೂ ಅನುಮೋದನೆ ಸಿಗದ ಹಿನ್ನೆಲೆಯಲ್ಲಿಇದೀಗ 32 ಕೋಟಿ ರೂ. ಮೊತ್ತದ ಪರಿಷ್ಕೃ ದರ ಪಟ್ಟಿಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. 2014 ರಲ್ಲಿ ಉಸ್ತುವಾರಿ ಸಚಿವರಾಗಿದ್ದ ಬಿ.ರಮಾನಾಥ ರೈ ಶಿಫಾರಸಿನ ಮೇರೆಗೆ ಸಿದ್ದರಾಮಯ್ಯ ನೇತೃತ್ವದ ಸರಕಾರವು ಈ ಮಹತ್ವದ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಿತ್ತು. ಒಂದು ಹಂತದ ಕಾಮಗಾರಿ ನಡೆದರೂ, ಕಾಮಗಾರಿ ಮುಗಿಸಲು ಬಿಜೆಪಿ ಸರಕಾರ ಆಸಕ್ತಿ ತೋರಿಸಿರಲಿಲ್ಲ. ಇದೀಗ ಮತ್ತೆ ಸಿದ್ದರಾಮಯ್ಯ ಸರಕಾರಕ್ಕೆ ಯೋಜನೆ ಮುಗಿಸಲು ಸವಾಲು ಎದರಾಗಿದೆ.
