ಉದಯವಾಹಿನಿ, ಫಿಲಿಪೈನ್ಸ್​,: ದಕ್ಷಿಣ ಫಿಲಿಪೈನ್ಸ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಶುಕ್ರವಾರ ಸಂಭವಿಸಿತ್ತು. ಕಂಪನ ಎಷ್ಟು ಬಲವಾಗಿತ್ತೆಂದರೆ ಕಚೇರಿಯಲ್ಲಿದ್ದ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಬೀಳುತ್ತಿತ್ತು., ಭಯಗೊಂಡ ಸಿಬ್ಬಂದಿ ಕಚೇರಿಯ ಡೆಸ್ಕ್​ ಕೆಳಗೆ ಅವಿತು ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಾವೊ ಓರಿಯಂಟಲ್‌ನ ಮನಾಯ್ ಪಟ್ಟಣದ ಬಳಿ ಕಡಲಾಚೆಗೆ ಭೂಕಂಪ ಸಂಭವಿಸಿತ್ತು.ಭೂಕಂಪದ ನಂತರ ಸಂಭವನೀಯ ಹಾನಿ ಮತ್ತು ನಂತರದ ಕಂಪನಗಳ ಬಗ್ಗೆ ಅಧಿಕಾರಿಗಳು ತಕ್ಷಣವೇ ಎಚ್ಚರಿಕೆ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!