ಉದಯವಾಹಿನಿ, ಕ್ಯಾಲಿಫೋರ್ನಿಯಾ: ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಗಾಯಕಿ ಕೇಟಿ ಪೆರ್ರಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದೀಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಕಳೆದ ಜುಲೈ ತಿಂಗಳಲ್ಲಿ ಈ ಜೋಡಿ ಜೊತೆಯಾಗಿ ರೆಸ್ಟೋರೆಂಟ್ ವೊಂದರಲ್ಲಿ ಕಾಣಿಸಿಕೊಂಡಿತ್ತು. ಇದು ಬಳಿಕ ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಉಹಾಪೋಹವನ್ನು ಉಂಟು ಮಾಡಿತ್ತು. ಇದೀಗ ಈ ಜೋಡಿ ವಿಹಾರ ನೌಕೆಯಲ್ಲಿ ಪರಸ್ಪರ ಚುಂಬಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಫೈರ್‌ವರ್ಕ್ ಗಾಯಕಿ ಕೇಟಿ ಪೆರ್ರಿ ವಿಹಾರ ನೌಕೆಯಲ್ಲಿ ಚುಂಬಿಸುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿವೆ. ಕೇಟಿ ಪೆರ್ರಿ ಕಪ್ಪು ಬಣ್ಣದ ಈಜುಡುಗೆಯಲ್ಲಿ ಕಾಣಿಸಿಕೊಂಡಿದ್ದು, ಟ್ರುಡೊ ಶರ್ಟ್‌ಲೆಸ್ ಜೀನ್ಸ್ ಧರಿಸಿದ್ದರು. ಇವರಿಬ್ಬರು ತಬ್ಬಿಕೊಂಡು ಚುಂಬಿಸುತ್ತಿರುವ ಚಿತ್ರವನ್ನು ಒಳಗೊಂಡಿದ್ದು, ಈ ಚಿತ್ರವನ್ನು ಸೆಪ್ಟೆಂಬರ್‌ನಲ್ಲಿ ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾ ಕರಾವಳಿಯಲ್ಲಿ ತೆಗೆದಿರುವುದಾಗಿದೆ ಎಂದು ಹೇಳಲಾಗುತ್ತಿದೆ.
ಕೇಟಿ ತಾವಿದ್ದ ದೋಣಿಯನ್ನು ತಿಮಿಂಗಿಲಗಳನ್ನು ವೀಕ್ಷಿಸುವ ಸಲುವಾಗಿ ನಿಲ್ಲಿಸಿ ಅವರಿಬ್ಬರು ಬಳಿಕ ಏಕಾಂತದಲ್ಲಿ ಸಮಯ ಕಳೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಟ್ರುಡೊ ಅವರ ತೋಳಿನ ಮೇಲಿನ ಹಚ್ಚೆಯನ್ನು ನೋಡುವವರೆಗೂ ಕೇಟಿ ಯಾರೊಂದಿಗೆ ಇದ್ದಾಳೆಂದು ನನಗೆ ತಿಳಿದಿರಲಿಲ್ಲ. ಬಳಿಕ ಅದು ಜಸ್ಟಿನ್ ಟ್ರುಡೊ ಎಂದು ತಕ್ಷಣ ಅರಿವಾಯಿತು ಎಂದು ಅವರು ತಿಳಿಸಿದ್ದಾರೆ.
