ಉದಯವಾಹಿನಿ, ಕ್ಯಾಲಿಫೋರ್ನಿಯಾ:  ಹಂಟಿಂಗ್ಟನ್ ಬೀಚ್‌ನ ಪೆಸಿಫಿಕ್ ಕೋಸ್ಟ್ ಹೆದ್ದಾರಿ ಮತ್ತು ಹಂಟಿಂಗ್ಟನ್ ಸ್ಟ್ರೀಟ್ ಬಳಿ ಹೆಲಿಕಾಪ್ಟರ್​ ಪತನಗೊಂಡಿದೆ ನಿನ್ನೆ ಮಧ್ಯಾಹ್ನ 2:09ರ ಸುಮಾರಿಗೆ ಒಂದು ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ದುರ್ಘಟನೆಗೆ ಕಾರಣ ಮತ್ತು ವಿವರಗಳು ಇನ್ನೂ ಸಂಪೂರ್ಣವಾಗಿ ಬಹಿರಂಗವಾಗಿಲ್ಲವಾದರೂ, ತುರ್ತು ಸೇವೆಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಸಂತ್ರಸ್ತರ ರಕ್ಷಣೆಗೆ ಕ್ರಮ ಕೈಗೊಂಡಿವೆ.
ಈ ಘಟನೆ ವಾಟರ್‌ಫ್ರಂಟ್ ಬೀಚ್ ರೆಸಾರ್ಟ್‌ನ ಮುಂಭಾಗದಲ್ಲಿ ನಡೆಯುತ್ತಿದ್ದ ‘ಕಾರ್ಸ್ ಎನ್ ಕಾಪ್ಟರ್ಸ್ ಆನ್ ದಿ ಕೋಸ್ಟ್’ ಎಂಬ ಕಾರ್ಯಕ್ರಮದ ಸ್ಥಳದ ಬಳಿ ಸಂಭವಿಸಿದೆ. ಈ ಅಪಘಾತದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸ್ತಳೀಯರನ್ನು ಬೆಚ್ಚಿ ಬೀಳಿಸಿದೆ.
ಹೆಲಿಕಾಪ್ಟರ್​ ಪತನ!
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳ ಪ್ರಕಾರ, ಹೆಲಿಕಾಪ್ಟರ್ ಹಯಾತ್ ರೀಜೆನ್ಸಿ ಹೋಟೆಲ್‌ನ ಮುಂಭಾಗದ ಬಳಿ ಇಳಿಯುವಾಗ ಮರಗಳ ನಡುವೆ ಮತ್ತು ಹೋಟೆಲ್‌ನ ಮುಂಭಾಗದ ರಚನೆಯ ನಡುವೆ ಸಿಲುಕಿಕೊಂಡಿದೆ. ಅವಶೇಷಗಳು ಸಿಲುಕಿರುವ ದೃಶ್ಯವು ಈ ಘಟನೆಯ ಗಂಭೀರತೆಯನ್ನು ತೋರಿಸುತ್ತದೆ. ಈ ಹೆಲಿಕಾಪ್ಟರ್​ ಪತನದಿಂದಾಗಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಐವರಿಗೆ ಗಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆ!
ಹಂಟಿಂಗ್ಟನ್ ಬೀಚ್ ಪೊಲೀಸರ ಪ್ರಕಾರ, ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಅವಶೇಷಗಳಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಇದರ ಜೊತೆಗೆ, ರಸ್ತೆಯಲ್ಲಿ ಇದ್ದ ಮೂವರು ವ್ಯಕ್ತಿಗಳೂ ಗಾಯಗೊಂಡಿದ್ದಾರೆ. ಒಟ್ಟು ಐದು ಮಂದಿ ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ. ತುರ್ತು ಸೇವಾ ತಂಡಗಳು ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾಗಿ, ಘಟನಾ ಸ್ಥಳವನ್ನು ಸುರಕ್ಷಿತಗೊಳಿಸಿವೆ. ಅಧಿಕಾರಿಗಳು ಈ ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖೆಯನ್ನು ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!