ಉದಯವಾಹಿನಿ, ಬಿಗ್ ಬಾಸ್ ಕನ್ನಡ ಸೀಸನ್ 12, ಎಂಬ ಥೀಮ್ ನಲ್ಲಿ ಅತ್ಯಂತ ರೋಚಕವಾಗಿ ಸಾಗುತ್ತಾ ಬಂದಿದೆ. ಈಗ ಇನ್ನೊಂದು ಅನಿರೀಕ್ಷಿತವನ್ನು ಕೊಡಲಿದೆ ಬಿಗ್ ಬಾಸ್! ಅದುವೇ ಮಿಡ್ ಸೀಸನ್ ಫಿನಾಲೆ. ಹೌದು. ಇದೇ ಮೊದಲ ಬಾರಿಗೆ ಮೂರನೇ ವಾರಕ್ಕೆ ಫಿನಾಲೆ ನಡೆಯಲಿದೆ. ಇದು ನಿರೀಕ್ಷೆಗೂ ಮೀರಿದ, ಕುತೂಹಲಕರ ತಿರುವುಗಳನ್ನು ತರಲಿದೆ.
ಈ ಫಿನಾಲೆಯಲ್ಲಿ ಭಾರೀ `ಎಲಿಮಿನೇಷನ್’ ನಡೆಯಲಿದ್ದು, ಜೊತೆಗೆ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯಲ್ಲಿ ಕಾಲಿಡುತ್ತಿದ್ದಾರೆ. ಇವರ ಆಗಮನದಿಂದ ಈಗಾಗಲೇ ಇರುವ ಸ್ಪರ್ಧಿಗಳ ಆಟಕ್ಕೆ ಹೊಸ ಉತ್ಸಾಹ ಮತ್ತು ತಿರುವು ಸಿಗಲಿದೆ. ಇದಲ್ಲದೆ, ಈ ಬಾರಿ ಮಿಡ್ ಸೀಸನ್ ವಿನ್ನರ್ ಯಾರೆಂದು ಘೋಷಿಸಲಾಗುವುದು ಮತ್ತು ಅವರಿಗೆ ಬಹುಮಾನ ಕೂಡಾ ನೀಡಲಾಗುತ್ತದೆ. ಈ ವಾರಾಂತ್ಯ ಪ್ರೇಕ್ಷಕರಿಗೆ ನೃತ್ಯ ಪ್ರದರ್ಶನ, ಹಾಸ್ಯಭರಿತ ಮಾತುಕತೆ ಹಾಗೂ ಅನಿರೀಕ್ಷಿತ ಸೆಲೆಬ್ರಿಟಿಗಳು ಕೂಡಾ ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ಅವರು ಮನೆಯಲ್ಲಿ ಆಟಗಳನ್ನು ಆಡುವುದಲ್ಲದೇ, ಸ್ಪರ್ಧಿಗಳೊಂದಿಗೆ ಬೆರೆಯುತ್ತಾ ಮರೆಯಲಾಗದ ಮನರಂಜನೆ ನೀಡಲಿದ್ದಾರಂತೆ. ಒಟ್ಟು 6 ಗಂಟೆಗಳ ಮನರಂಜನಾ ಸಂಭ್ರಮ ಇದಾಗಿದೆ. ಅಕ್ಟೋಬರ್ 18 ಮತ್ತು 19 ರಂದು ಕಲರ್ಸ್ ಕನ್ನಡದಲ್ಲಿ ರಾತ್ರಿ 8 ರಿಂದ 11 ಗಂಟೆಗಳವರೆಗೆ ಪ್ರಸಾರವಾಗುವ ಮಿಡ್ ಸೀಸನ್ ಫಿನಾಲೆ ಈಗಿನಿಂದಲೇ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!