ಉದಯವಾಹಿನಿ, ಎರಡು ಟೆಸ್ಟ್ ಪಂದ್ಯಗಳಲ್ಲಿಯೂ ವೆಸ್ಟ್ ಇಂಡೀಸ್ ತಂಡವನ್ನು ಭಾರತ ಸೋಲಿ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು. ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತಕ್ಕೆ ಇದು ಮೊದಲ ಟೆಸ್ಟ್ ಸರಣಿ ಜಯ. ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐದನೇ ಮತ್ತು ಕೊನೆಯ ದಿನದಂದು ಭಾರತ ತಂಡಕ್ಕೆ ಗೆಲ್ಲಲು 58 ರನ್​ಗಳ ಅಗತ್ಯವಿತ್ತು. ಈ ಗುರಿಯನ್ನು ಮೊದಲ ಸೆಷನ್​ನಲ್ಲಿಯೇ ಭಾರತ ಮುಟ್ಟಿತು. ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಪರ 5 ವಿಕೆಟ್ ಸೇರಿದಂತೆ ಎರಡನೇ ಟೆಸ್ಟ್​ನಲ್ಲಿ ಒಟ್ಟು 8 ವಿಕೆಟ್ ಕಬಳಿಸಿದ ಸ್ಪಿನ್ನರ್ ಕುಲ್ದೀಪ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಕುಲ್ದೀಪ್ ಯಾದವ್ ತಮ್ಮ ಅದ್ಭುತ ಪ್ರದರ್ಶನದ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟರು. ಈ ಆಟಗಾರನಿಂದ ಯಾವಗಲೂ ಉತ್ತಮ ಸಲಹೆಗಳನ್ನು ಪಡೆಯುತ್ತೇನೆ ಎಂದು ತಮ್ಮ ಅದ್ಭುತ ಫಾರ್ಮ್​ಗೆ ಕಾರಣವಾದವರ ಬಗ್ಗೆ ಕುಲ್ದೀಪ್ ಯಾದವ್ ಮಾತನಾಡಿದರು.
ಸಹ ಆಟಗಾರನ ಗುಣಗಾನ ಪಂದ್ಯದ ನಂತರ ಮಾತನಾಡಿದ ಕುಲ್ದೀಪ್ ಯಾದವ್ ಅವರು ರವೀಂದ್ರ ಜಡೇಜಾ ಅವರನ್ನು ಹೊಗಳಿದರು. ಜಡೇಜಾ ನಮ್ಮ ಜೊತೆಗಿರುವುದು ಬಹಳ ಸಂತೋಷ ತಂದಿದೆ. ಅವರು ಯಾವಗಲೂ ಕಷ್ಟಕರ ಸಂದರ್ಭಗಳಲ್ಲಿ ನನಗೆ ಮಾರ್ಗದರ್ಶನ ನೀಡುತ್ತಾರೆ. ಅವರಿಂದ ನಾನು ಬಹಳಷ್ಟು ಕಲಿಯುತ್ತಿದ್ದೇನೆ. ಅವರೊಂದಿಗೆ ನಾನು ತಂಡದಲ್ಲಿರುವುದು ತುಂಬಾ ಸಹಾಯಕವಾಗಿದೆ ಎಂದು ಜಡೇಜಾ ಬಗ್ಗೆ ಗುಣಗಾನ ಮಾಡಿದರು.

Leave a Reply

Your email address will not be published. Required fields are marked *

error: Content is protected !!