ಉದಯವಾಹಿನಿ, ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಶೀಘ್ರದಲ್ಲೇ 3-ODI ಮತ್ತು 5-T20 ಸರಣಿ ನಡೆಯಲಿದೆ. ಈ ಪ್ರವಾಸದಲ್ಲಿ ನಡೆಯುವ ಎರಡೂ ಸರಣಿಗೆ ಟೀಮ್ ಇಂಡಿಯಾದ ಯುವ ವೇಗಿ ಹರ್ಷಿತ್ ರಾಣಾ ಅವರನ್ನು ಆಯ್ಕೆ ಮಾಡಲಾಗಿದೆ. ಗೌತಮ್ ಗಂಭೀರ್ (Gautam, Gambhir) ಮುಖ್ಯ ಕೋಚ್ ಆಗಿರುವುದರಿಂದ ಎರಡೂ ಸರಣಿಗಳಿಗೆ ಹರ್ಷಿತ್ ಅವರನ್ನು ಕೋಚ್ ಆಟಗಾರನಾಗಿ ಆಯ್ಕೆ ಮಾಡಿದ್ದಕ್ಕಾಗಿ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಟೀಕಿಸಿದ್ದಾರೆ. ಗಂಭೀರ್ ತಮ್ಮ ಮಾಜಿ ಫ್ರಾಂಚೈಸಿ ಕೆಕೆಆರ್ ಕೋಟಾದಿಂದ ಹರ್ಷಿತ್ ರಾಣಾರನ್ನ ಆಯ್ಕೆ ಮಾಡಲಾಗಿದೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ನನ್ನನ್ನ ಟಾರ್ಗೆಟ್ ಮಾಡಿ
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ನಂತರ, ಗಂಭೀರ್ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ, ಹರ್ಷಿತ್ ವಿರುದ್ಧ ನಡೆಯುತ್ತಿರುವ ಟ್ರೋಲಿಂಗ್‌ಗೆ ಪ್ರತಿಕ್ರಿಯಿಸಿ, 23 ವರ್ಷದ ಹುಡುಗನನ್ನ ಗುರಿಯಾಗಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಮತ್ತು ಅಗತ್ಯವಿದ್ದರೆ, ನನ್ನನ್ನ ಗುರಿಯಾಗಿಸಬೇಕು ಎಂದು ಅವರು ಟೀಕೆಗೆ ತಿರುಗೇಟು ನೀಡಿದ್ದಾರೆ.
ವೀವ್ಸ್​ಗೋಸ್ಕರ್ ಬಾಯಿಗೆ ಬಂದಂತೆ ಮಾತನಾಡಬೇಡಿ: “ಯೂಟ್ಯೂಬ್ ಚಾನೆಲ್ ನಡೆಸುವವರು 23 ವರ್ಷದ ಹುಡುಗನನ್ನು ಗುರಿಯಾಗಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಟ್ರೋಲಿಂಗ್ ನಡೆಯುತ್ತಿದೆ. ಅಂತಹ ಜನರ ಮನಸ್ಥಿತಿ ಹೇಗಿರುತ್ತದೆ ಎಂದು ಊಹಿಸಿ. ನೀವು ನನ್ನನ್ನು ಟಾರ್ಗೆಟ್ ಮಾಡಲು ಬಯಸಿದರೆ ಮಾಡಿ. ನಾನು ಅದನ್ನು ನಿಭಾಯಿಸುತ್ತೇನೆ. ಆದರೆ, ನಿಮ್ಮ ಯೂಟ್ಯೂಬ್ ವೀಕ್ಷಣೆಗಳಿಗಾಗಿ ಯುವ ಆಟಗಾರನನ್ನು ಟ್ರೋಲ್ ಮಾಡುವುದು ನಾಚಿಕೆಗೇಡಿನ ಕೃತ್ಯ. ಅರ್ಹತೆಯ ಮೇಲೆ ಕ್ರಿಕೆಟ್ ಆಡುತ್ತಿದ್ದಾರೆ. ಅಂತಹ ಯುವ ಕ್ರಿಕೆಟಿಗರನ್ನು ಟಾರ್ಗೆಟ್ ಮಾಡುವುದನ್ನ ನಿಲ್ಲಿಸಿ” ಎಂದು ಗಂಭೀರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!