ಉದಯವಾಹಿನಿ, ದಿಯಾ ಸಿನಿಮಾ ಮೂಲಕ ಖ್ಯಾತಿ ಪಡೆದ ನಟ ದೀಕ್ಷಿತ್ ಶೆಟ್ಟಿ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ದೀಕ್ಷಿತ್ ಶೆಟ್ಟಿ ಕನ್ನಡವಷ್ಟೇ ಅಲ್ಲದೇ ಪರಭಾಷಾ ಸಿನಿಮಾದಲ್ಲೂ ನಟಿಸಿದ್ದಾರೆ. ಕನ್ನಡದ ಜೊತೆ ಜೊತೆಗೆ ಪರಭಾಷಾ ಚಿತ್ರಗಳಲ್ಲೂ ಬ್ಯುಸಿಯಾಗಿರುವ ದೀಕ್ಷಿತ್ ಶೆಟ್ಟಿ ತಮ್ಮ ಸಿನಿಮಾ ಪಯಣವನ್ನು ಶುರು ಮಾಡಿರುವ ರೋಚಕ ಕಥೆಯನ್ನ ಹಂಚಿಕೊಂಡಿದ್ದಾರೆ. ಮೊದ ಮೊದಲಿಗೆ ಸಿನಿಮಾ ಜರ್ನಿಯನ್ನ ಬಿಎಂಟಿಸಿಯಿಂದ ಶುರು ಮಾಡಿದ ದೀಕ್ಷಿತ್ ಶೆಟ್ಟಿ ಈಗ ರೇಂಜ್ ರೋವರ್‌ವರೆಗೂ ಬಂದಿರುವ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನಟ ದೀಕ್ಷಿತ್ ಶೆಟ್ಟಿ ಸಾಮಾನ್ಯನಿಂದ ಶುರುಮಾಡಿದ ಜರ್ನಿ ಇವತ್ತು ರೇಂಜ್ ರೋವರ್ ರೇಂಜ್‌ಗೆ ತಂದು ನಿಲ್ಲಿಸಿದೆ. ದೀಕ್ಷಿತ್ ಶೆಟ್ಟಿ ಸದ್ಯ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಸಿನಿಮಾದಲ್ಲಿ ನಟಿಸಿದ್ದಾರೆ. ಅಭಿಷೇಕ್ ನಿರ್ದೇಶನದ ಈ ಸಿನಿಮಾದಲ್ಲಿ ದೀಕ್ಷಿತ್ ಜೊತೆಗೆ ಬೃಂದಾ ಆಚಾರ್ ನಾಯಕಿಯಾಗಿ ನಟಿಸಿದ್ದಾರೆ. ತೆಲುಗಿನಲ್ಲಿ ನಾನಿ ನಟನೆಯ ದಸರಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ದಿ ಗರ್ಲ್‌ಫ್ರೆಂಡ್ ಸಿನಿಮಾದಲ್ಲಿ ನಟಿಸಿದ್ದಾರೆ.
