ಉದಯವಾಹಿನಿ, ತಮಿಳುನಾಡು: ತಮಿಳಿನ ಸೂಪರ್ ಸ್ಟಾರ್ ನಟ ವಿಜಯ್ ರಾಜಕೀಯ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ವಿಜಯ್ರ ರಾಜಕೀಯ ಪ್ರವೇಶದ ಸುದ್ದಿ ಹಬ್ಬುತ್ತಿದ್ದಂತೆ ಕೆಲವು ಟೀಕೆಗಳು ಸಹ ವ್ಯಕ್ತವಾಗಿವೆ. ವಿಜಯ್ ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಕೆ ರಾಜನ್, ”ಬಡವರಿಗೆ ಸಹಾಯ ಮಾಡುವ ಮನಸ್ಸಿದ್ದರೆ ಮೊದಲು ತಮ್ಮ ಸಿನಿಮಾ ಟಿಕೆಟ್ನ ಬೆಲೆ ಕಡಿಮೆ ಮಾಡಿ ತೋರಿಸಲಿ. ಅದು ಅವರ ಕೈಯಲ್ಲೇ ಇದೆಯಲ್ಲ. ತನ್ನ ಸಿನಿಮಾ ಟಿಕೆಟ್ಗಳು ಭಾರಿ ಬೆಲೆಗೆ ಮಾರಾಟವಾಗುವುದನ್ನು ತಡೆಯುವ ಶಕ್ತಿ ಆತನಿಗಿಲ್ಲ ಹಾಗಿದ್ದರೆ ರಾಜಕೀಯಕ್ಕೆ ಬಂದು ಜನಗಳ ಒಳತು ಮಾಡುತ್ತಾರೆ ಎಂದು ಹೇಗೆ ನಂಬುವುದು” ಎಂದಿದ್ದಾರೆ. ”ವಿಜಯ್ಗೆ ರಾಜಕೀಯಕ್ಕೆ ಪ್ರವೇಶಿಸುವ ಇಚ್ಛೆ ಇದ್ದರೆ ಪ್ರವೇಶಿಸಲು ಅವರನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಅದು ಅವರ ಇಚ್ಛೆ, ಒಂದೊಮ್ಮೆ ವಿಜಯ್ ಒಳ್ಳೆಯ ರಾಜಕಾರಣ ಮಾಡಿದರೆ ಜನರೇ ಅವರ ಬೆನ್ನಿಗೆ ನಿಲ್ಲುತ್ತಾರೆ. ಆದರೆ ರಾಜಕೀಯಕ್ಕಾಗಿ ಸಿನಿಮಾ ವೃತ್ತಿಯನ್ನು ಬಿಡುವುದು ಒಳ್ಳೆಯದಲ್ಲ. ಅವರು ಒಳ್ಳೆಯ ನಟ ಅವರು ಇನ್ನೂ ಹೆಚ್ಚು-ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು” ಎಂದಿದ್ದಾರೆ.
