ಉದಯವಾಹಿನಿ, ನವದೆಹಲಿ: ದೆಹಲಿ ಹೈಕೋರ್ಟ್ ವರ್ಚುವಲ್ ವಿಚಾರಣೆ ವೇಳೆ ವಕೀಲರೊಬ್ಬರು ಮಹಿಳೆಯೊಬ್ಬರಿಗೆ ಚುಂಬಿಸಿರುವ ವಿಡಿಯೋವೊಂದು ಸಮಾಜಿಕ ಜಾಲತಾಣ ಗಳಲ್ಲಿ ಭಾರಿ ವೈರಲ್ ಆಗುತ್ತದೆ. ಆನ್‌ಲೈನ್ ವಿಚಾರಣೆ ಆರಂಭಕ್ಕೂ ಮುನ್ನ ವಕೀಲರು ಮಹಿಳೆಯೊಂದಿಗೆ ಸರಸದಲ್ಲಿ ತೊಡಗಿರುವುದು ವಿಡಿಯೋದಲ್ಲಿ ಕಂಡುಬಂದಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯು ಮಂಗಳವಾರ ನಡೆದಿದೆ ಎನ್ನಲಾಗಿದ್ದು, ಈ ವರ್ತನೆ ವೇಳೆ ನ್ಯಾಯಾಲಯದ ವರ್ಚುವಲ್ ವಿಚಾರಣೆ ಇನ್ನೂ ಆರಂಭವಾಗಿರಲಿಲ್ಲ ಎಂದು ಹೇಳಲಾಗಿದೆ. ಜನರು ಹಾಗೂ ಪ್ರತಿವಾದಿಗಳು ನ್ಯಾಯಾಧೀಶರ ಆಗಮನಕ್ಕಾಗಿ ಕಾಯುತ್ತಿದ್ದ ವೇಳೆ ಈ ದೃಶ್ಯ ಕಾಣಿಸಿದೆ. ತಮ್ಮ ಲ್ಯಾಪ್‌ಟಾಪ್ ಕ್ಯಾಮರಾ ಆನ್ ಇರುವುದನ್ನು ಅರಿಯದೇ ವಕೀಲರು ಮಹಿಳೆಯ ಕೈ ಹಿಡಿದು ಎಳೆದು ಚುಂಬಿಸಿದ್ದಾರೆ ಎನ್ನಲಾಗಿದೆ.
ರೂಮ್‌ನಲ್ಲಿ ವಕೀಲರ ಡ್ರೆಸ್‌ನಲ್ಲಿದ್ದ ವ್ಯಕ್ತಿಯು ವರ್ಚುವಲ್ ವಿಚಾರಣೆಗಾಗಿ ಕಾಯುತ್ತಾ ಕ್ಯಾಮರಾ ಆನ್ ಮಾಡಿಕೊಂಡು ಚೇರ್‌ಮೇಲೆ ಕುಳಿತಿದ್ದರು. ಅವರ ಚೇರ್‌ನ ಸ್ವಲ್ಪ ದೂರದಲ್ಲೇ ಸೀರೆಯುಟ್ಟ ಮಹಿಳೆಯೊಬ್ಬಳು ನಿಂತಿದ್ದಳು. ವಕೀಲರು ಆಕೆಯ ಕೈ ಹಿಡಿದು ತನ್ನತ್ತ ಎಳೆದಿದ್ದಾರೆ. ಆಕೆ ಹಿಂದೆ ಸರಿಯಲು ಯತ್ನಿಸಿದರೂ ಬಿಡದೇ ಮತ್ತೆ ಎಳೆದು ಚುಂಬಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
