ಉದಯವಾಹಿನಿ, ಬೆಂಗಳೂರು: ಇಲ್ಲಿನ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ನಡೆದ ʻಕನಕ ಕಾವ್ಯ ದೀವಿಗೆ ಕನ್ನಡ ನಾಡ ನುಡಿ ಉತ್ಸವʼ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ, ಸಿಎಂ ಸಿದ್ದರಾಮಯ್ಯ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಸಂತೋಷದಿಂದಲೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ, ಸಿಎಂ ಜೊತೆಗೆ ಆಪ್ತ ಮಾತುಕತೆ ನಡೆಸಿದರು. ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಆಗಮಿಸಿದಾಗ ಮುನಿರತ್ನ ಅವರು ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
ಬಳಿಕ ವೇದಿಕೆಯಲ್ಲಿ ಮಾತನಾಡಿದ ಶಾಸಕರು, ಭಾಷಣದ ಆರಂಭದಲ್ಲಿ ನೆಚ್ಚಿನ ಸಿಎಂ ಸಿದ್ದರಾಮಯ್ಯ ಎಂದು ಸಂಬೋಧನೆ ಮಾಡಿದರು. ಅಣ್ಣನ ನೋಡಬೇಕು ಎಂದು 5 ಗಂಟೆಗೆ ಬಂದಿದ್ದೆ ಎಂದು ಸಿದ್ದರಾಮಯ್ಯ ಅವರನ್ನುದ್ದೇಶಿಸಿ ಮಾತನಾಡಿದ್ರು.

ಗನ್‌ ಮ್ಯಾನ್‌ಗೆ ಬೇಡಿಕೆ
ಮುಂದುವರಿದು… ಜ್ಯೋತಿ ಹೊರತಾಗಿ ಬೆಂಕಿಯ ಜೊತೆ ಬದುಕೊಕಾಗಲ್ಲ. ಇವತ್ತು ಜ್ಯೋತಿಗೆ ನಾವು ಎಣ್ಣೆ ಹಾಕ್ತೇವೆ. ಆದ್ರೆ ಬೆಂಕಿಗೆ ಫೈರ್ ಇಂಜಿನ್ ತರ್ತೇವೆ. ಸಿದ್ದರಾಮಯ್ಯನವಬರೇ ನೀವು ಜ್ಯೋತಿ ಇದ್ದಂತೆ ಯಾವಾಗಲೂ ಬೆಳಗುತ್ತಿರಬೇಕು, ಒಳ್ಳೆಯ ಕೆಲಸ ಮಾಡ್ತಿದ್ದೀರಿ. ನನಗೆ ಸಂತಾಪ ಸೂಚಿಸಿದಾಗ ಸಿದ್ದರಾಮಯ್ಯ ಜೊತೆ ಇದ್ರು ಎಂದು ಹೇಳ್ತಾರಲ್ಲ. ಅಂತಹ ಒಳ್ಳೆಯ ನಾಯಕರೊಂದಿಗೆ ಇದ್ದಿದ್ದಕ್ಕೆ ನನಗೆ ಸಂತೋಷ ಇದೆ. ಅಣ್ಣ ನಮ್ಮ ಕ್ಷೇತ್ರದಲ್ಲಿ ಹಲವು ಕೆಲಸ ನಿಂತೋಗಿದೆ. ನನ್ನ ಕ್ಷೇತ್ರದ ಕೆಲವು ಕೆಲಸ ನಿಂತು ಹೋಗಿದೆ. ನನ್ನ ಕ್ಷೇತ್ರಕ್ಕೆ ಸಹಾಯ ಮಾಡಿ, ನನ್ನ ಕ್ಷೇತ್ರಕ್ಕೆ ಅನುದಾನ ಕೊಡಿ. ಗನ್ ಮ್ಯಾನ್ ಕೊಟ್ಟಿಲ್ಲ ನನಗೆ, ನಾನು ಓಡಾಡಬಾರದು ಎಂದು ಗನ್ ಮ್ಯಾನ್ ಕೊಟ್ಟಿಲ್ಲ. ಮನೆಲಿ ಇರಲಿ, ಹೊರಗೆ ಬಂದ್ರೆ ಮೊಟ್ಟೆಯಲ್ಲಿ ಹೊಡಿಬಹುದು ಎಂದು ಹೀಗೆ ಮಾಡಿದ್ದಾರೆ. ಪ್ರಜಾಪ್ರಭುತ್ವ ರಾಜ್ಯ ಇದು ನನಗೆ ಗನ್ ಮ್ಯಾನ್ ಕೊಡಿ ಎಂದು ಬೇಡಿಕೆಯಿಟ್ಟರು.

Leave a Reply

Your email address will not be published. Required fields are marked *

error: Content is protected !!