ಉದಯವಾಹಿನಿ, ಚಾಮರಾಜನಗರ: 27 ತಿಂಗಳಿಂದ ಸಂಬಳ ( ನೀಡದ್ದಕ್ಕೆ ಬೇಸತ್ತು ಗ್ರಾಮ ಪಂಚಾಯತ್ ವಾಟರ್‌ಮ್ಯಾನ್ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಚಾಮರಾಜನಗರ ತಾಲೂಕು ಹೊಂಗನೂರು ಗ್ರಾಮದಲ್ಲಿ ನಡೆದಿದೆ. ಚಾಮರಾಜನಗರ: 27 ತಿಂಗಳಿಂದ ಸಂಬಳ ನೀಡದ್ದಕ್ಕೆ ಬೇಸತ್ತು ಗ್ರಾಮ ಪಂಚಾಯತ್ ವಾಟರ್‌ಮ್ಯಾನ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ತಾಲೂಕು ಹೊಂಗನೂರು ಗ್ರಾಮದಲ್ಲಿ ನಡೆದಿದೆ. ವಾಟರ್‌ಮ್ಯಾನ್ ಚಿಕ್ಕೂಸನಾಯಕ (60) ಅವರು ಗ್ರಾಮ ಪಂಚಾಯತ್ (Village Panchayat) ಕಚೇರಿ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ಶರಣಾಗುವ ಮುನ್ನ ಚಿಕ್ಕೂಸನಾಯಕ ಡೆತ್ ನೋಟ್ ಬರೆದು ಗೋಡೆಗೆ ಅಂಟಿಸಿದ್ದಾರೆ. ಗ್ರಾಪಂ ಅಧ್ಯಕ್ಷೆಯ ಪತಿ ಮೋಹನ್‌ಕುಮಾರ್, ಪಿಡಿಒ ರಾಮೇಗೌಡ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ನನಗೆ ರಜೆ ಬೇಕೆಂದರೂ ಕೊಡದೇ ಕಿರುಕುಳ ಕೊಡುತ್ತಿದ್ದರು. ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ವರೆಗೂ ಕೆಲಸ ಮಾಡಿಸುತ್ತಿದ್ದರು. ಎಷ್ಟು ಬಾರಿ ಮನವಿ ಮಾಡಿದರೂ ಸಂಬಳ ಕೊಡದೇ ಕಿರುಕುಳ ನೀಡುತ್ತಿದ್ದರು. ಬಿಲ್ ಕಲೆಕ್ಷನ್ ಮಾಡಿಕೊಂಡು ಬಂದರಷ್ಟೇ ಸಂಬಳ ಕೊಡುವುದಾಗಿ ಪಿಡಿಒ ರಾಮೇಗೌಡ ಪೀಡಿಸಿಸುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ.
