ಉದಯವಾಹಿನಿ, ಸ್ಪೇಸ್ ಎಕ್ಸ್‌ ನ ಮೌಲ್ಯಮಾಪನದ ನಂತರ ಎಲಾನ್ ಮಸ್ಕ್ ರ ಆಸ್ತಿಯ ಮೌಲ್ಯ 168 ಶತಕೋಟಿ ಡಾಲರ್ ಏರಲಿದ್ದು ಒಟ್ಟು ನಿವ್ವಳ ಆಸ್ತಿ ಮೌಲ್ಯವು 677 ಶತಕೋಟಿ ಡಾಲರ್ ಗಳಿಗೆ ಏರಲಿದೆ.
ಜಾಗತಿಕವಾಗಿ 600 ಶತಕೋಟಿ ಡಾಲರ್ ಗಳಷ್ಟು ನಿವ್ವಳ ಆಸ್ತಿ ಮೌಲ್ಯವನ್ನು ದಾಖಲಿಸಿದ ಮೊತ್ತ ಮೊದಲ ವ್ಯಕ್ತಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ ಎಲಾನ್ ಮಸ್ಕ್ ಎಲಾನ್ ಮಸ್ಕ್ ಒಡೆತನದ ಖಾಸಗಿ ರಾಕೆಟ್ ಮತ್ತು ಉಪಗ್ರಹ ತಯಾರಿಕಾ ಕಂಪನಿ ಸ್ಪೇಸ್ ಎಕ್ಸ್ ಸ್ಟಾರ್ಟಪ್ ರೂ 800 ಶತಕೋಟಿ ಡಾಲರ್ ಮೌಲ್ಯಮಾಪನದಲ್ಲಿ ಸಾರ್ವಜನಿಕ ಮಾರುಕಟ್ಟೆಗೆ ತೆರೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅವರು ನಿವ್ವಳ ಆಸ್ತಿ ಮೌಲ್ಯದಲ್ಲಿ ಏರಿಕೆಯಾಗಿದೆ.
ಕಳೆದ ಅಕ್ಟೋಬರ್ ನಲ್ಲಿ 500 ಶತಕೋಟಿ ಡಾಲರ್ ನಿವ್ವಳ ಆಸ್ತಿ ಮೌಲ್ಯವನ್ನು ದಾಟಿದ ಪ್ರಥಮ ವ್ಯಕ್ತಿ ಎನ್ನುವ ದಾಖಲೆಯನ್ನು ಅವರು ಸಾಧಿಸಿದ್ದರು. ಅವರು ಸ್ಪೇಸ್ ಎಕ್ಸ್ ಸಂಸ್ಥೆಯಲ್ಲಿ ಶೇ 42ರಷ್ಟು ಷೇರುಗಳ ಪಾಲನ್ನು ಹೊಂದಿದ್ದಾರೆ. ಸ್ಪೇಸ್ ಎಕ್ಸ್ ಮುಂದಿನ ವರ್ಷ ಸಾರ್ವಜನಿಕ ಐಪಿಒಗೆ ತೆರೆದುಕೊಳ್ಳಲಿದೆ.
ಎಲಾನ್ ಮಸ್ಕ್ ಒಡೆತನದ ಖಾಸಗಿ ರಾಕೆಟ್ ಮತ್ತು ಉಪಗ್ರಹ ತಯಾರಿಕಾ ಕಂಪನಿ ಸ್ಪೇಸ್ ಎಕ್ಸ್ ಸ್ಟಾರ್ಟಪ್ ರೂ. 800 ಶತಕೋಟಿ ಡಾಲ‌ರ್ ಮೌಲ್ಯಮಾಪನದಲ್ಲಿ ಸಾರ್ವಜನಿಕ ಮಾರುಕಟ್ಟೆಗೆ ತೆರೆದುಕೊಳ್ಳಲಿದೆ. ಸ್ಪೇಸ್ ಎಕ್ಸ್‌ ನ ಮೌಲ್ಯಮಾಪನದ ನಂತರ ಎಲಾನ್ ಮಸ್ಕ್ ರ ಆಸ್ತಿಯ ಮೌಲ್ಯ 168 ಶತಕೋಟಿ ಡಾಲರ್ ಏರಲಿದ್ದು, ಒಟ್ಟು ನಿವ್ವಳ ಆಸ್ತಿ ಮೌಲ್ಯವು 677 ಶತಕೋಟಿ ಡಾಲರ್ ಗಳಿಗೆ ಏರಲಿದೆ.

Leave a Reply

Your email address will not be published. Required fields are marked *

error: Content is protected !!