
ಉದಯವಾಹಿನಿ, ಇಂದೋರ್: ಸರ್ಕಾರಿ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದನ್ನು ವಿರೋಧಿಸಿದ್ದಕ್ಕೆ ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಮೂತ್ರ ವಿಸರ್ಜನೆ ಮಾಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ) ಕಟ್ನಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯು ರಾಜ್ಯದ ಗ್ರಾಮೀಣ ಭಾಗದಲ್ಲಿ ಪುನರಾವರ್ತಿತ ಜಾತಿ ಆಧಾರಿತ ಹಿಂಸಾಚಾರದ ಬಗ್ಗೆ ಆಕ್ರೋಶಕ್ಕೆ ಕಾರಣವಾಗಿದೆ .
36 ವರ್ಷದ ರಾಜ್‌ಕುಮಾರ್ ಚೌಧರಿ ಎಂಬುವವರು ಹಲ್ಲೆಗೊಳಗಾದವರು. ಕಟ್ನಿ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಿದ ದೂರಿನ ಪ್ರಕಾರ, ಅಕ್ಟೋಬರ್ 13ರ ಸಂಜೆ ತನ್ನ ಕೃಷಿ ಭೂಮಿಯ ಬಳಿಯ ರಾಮಗಢ ಬೆಟ್ಟದಿಂದ ಅಕ್ರಮವಾಗಿ ಜಲ್ಲಿಕಲ್ಲು ಅಗೆಯುವುದನ್ನು ವಿರೋಧಿಸಿದ್ದಾಗಿ ಹೇಳಿದ್ದಾರೆ. ಗ್ರಾಮದ ಸರಪಂಚ್ ರಾಮಾನುಜ್ ಪಾಂಡೆ ಮತ್ತು ಅವರ ಸಹಚರರ ಮೇಲ್ವಿಚಾರಣೆಯಲ್ಲಿ ಈ ಚಟುವಟಿಕೆ ನಡೆಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಚೌಧರಿ ಧ್ವನಿ ಎತ್ತಿದಾಗ, ಅವರ ಮೇಲೆ ನಿಂದಿಸಿ ಹಲ್ಲೆ ನಡೆಸಲಾಯಿತು ಎಂದು ಆರೋಪಿಸಲಾಗಿದೆ. ಅವರು ಜಾತಿ ಬಗ್ಗೆ ನಿಂದನಾತ್ಮಕ ಮಾತುಗಳನ್ನಾಡಿದ್ಲಲ್ಲದೆ, ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಆರೋಪಿಸಿದ್ದಾರೆ. ಅಲ್ಲದೆ ಮನೆಗೆ ಹೋಗುವಾಗ ನನ್ನ ಮೇಲೆ ಹೊಂಚು ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿದ್ದಾರೆ.
