ಉದಯವಾಹಿನಿ, ನವದೆಹಲಿ: ಕಾಫಿ ಪ್ರಿಯರಿಗೆ ಹೊತ್ತಾರೆ ಒಂದು ಸ್ಟ್ರಾಂಗ್‌ ಕಾಫಿ ಹೊಟ್ಟೆ ಸೇರದಿದ್ದರೆ ಸರಿಯಾಗಿ ಬೆಳಗೇ ಆಗುವುದಿಲ್ಲ. ಸಂಜೆಯಾಗುತ್ತಿದ್ದಂತೆ ಮತ್ತೆ ಕಾಫಿಯತ್ತ ಮನಸ್ಸು ತುಡಿಯಲು ಆರಂಭಿ ಸುತ್ತದೆ. ಇನ್ನು ಚಳಿ ದೇಶಗಳಲ್ಲಂತೂ ಕಾಫಿಯ ಅಳತೆ ಕಪ್‌ಗಳಲ್ಲಿ ಅಲ್ಲ, ಮಗ್‌ಗಳಲ್ಲಿ! ಘಂ ಎನ್ನುವ ಪರಿಮಳ ಮತ್ತು ರುಚಿಗೆ ಮನಸೋತು, ದೇಹದಲ್ಲೂ ಶಕ್ತಿ ಸಂಚಯನ ಆಗುತ್ತದೆಂಬ ನೆಪವೊಡ್ಡಿ ಆಗಾಗ ಕಾಫಿ ಕುಡಿಯುವ ಅಭ್ಯಾಸ (Drink Coffee) ಅಥವಾ ಚಟ ಮಾಡಿಕೊಂಡರೆ ಮಾತ್ರ ಕೆಲಸ ಕೆಟ್ಟಿತೆಂದೇ ಅರ್ಥ. ಕಾಫಿ ಚಟ ಆರೋಗ್ಯಕ್ಕೆ ಮಾರಕವಾಗುವ ಹಾಗೆ ಇರದಂತೆ ಏನು ಮಾಡಬಹುದು?

ಓವರ್‌ಡೋಸ್!:‌ ಇದೇ ದೊಡ್ಡ ಸಮಸ್ಯೆ. ಬೆಳಗ್ಗೆ ಮತ್ತು ಸಂಜೆ ಮಾಮೂಲಿ ಡೋಸ್‌ ಕಾಫಿ; ನಡುವೆ ಮನೆಗ್ಯಾರೋ ಬಂದರು- ಅವರೊಂದಿಗೆ; ಹೊರಗೆ ಹೋದಾಗ ಫ್ರೆಂಡ್‌ ಸಿಕ್ಕಿದ್ದರು- ಅವ ರೊಂದಿಗೆ; ಆಫೀಸ್‌ನಲ್ಲಿ ಸಹೋದ್ಯೋಗಿ ಕಾಫಿಗೆ ಕರೆದಾಗ ಇಲ್ಲ ಎನ್ನುವುದು ಹೇಗೆ? ಇಷ್ಟರ ಲ್ಲಾಗಲೇ ಐದು ಕಪ್‌ ಕಾಫಿ ಹೊಟ್ಟೆ ಸೇರಿಯಾಯ್ತು. ದೇಹ ಹಾಳಾಗುವುದಕ್ಕೆ ಈ ಪ್ರಮಾಣದ ಕಾಫಿ ಬೇಕಾದಷ್ಟಾಯಿತು. ನಿದ್ದೆಗೇಡು, ಬಿಪಿ, ಹೃದ್ರೋಗ- ಯಾವುದು ಬೇಕು? ಅತ್ಯಂತ ಕಟ್ಟುನಿಟ್ಟಾಗಿ, ಏನೇ ಆದರೂ ದಿನಕ್ಕೆ ಮೂರು ಕಪ್‌ ಮೀರುವುದಿಲ್ಲ ಎಂಬ ನಿಶ್ಚಯ ಮಾಡಿಕೊಂಡು- ಅದರಂತೆ ನಡೆಯಿರಿ. ಅಂದಹಾಗೆ, ಕಪ್‌ ಅಳತೆ ಸಣ್ಣದಿದ್ದಷ್ಟೂ ಒಳ್ಳೆಯದು
ಹೆಚ್ಚು ನೀರು ಬೇಕು: ಕಾಫಿ ಕುಡಿದಷ್ಟೂ ಹೆಚ್ಚಿನ ಮೂತ್ರ ದೇಹದಿಂದ ಹೊರಹೋಗುತ್ತದೆ. ಅಂದರೆ, ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರನ್ನೂ ಒದಗಿಸಬೇಕಾಗುತ್ತದೆ. ಇಲ್ಲದಿದ್ದರೆ ಸುಸ್ತು, ಆಯಾಸ, ತಲೆನೋವು ಮುಂತಾದ ಹಲವು ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಬೇಸಿಗೆ ಯಲ್ಲಿ ಕಾಫಿ ಮಾತ್ರ ಕುಡಿದು, ನೀರು ಸರಿಯಾಗಿ ಕುಡಿಯದಿದ್ದರೆ ಆಸ್ಪತ್ರೆ ಸೇರುವುದು ಖಚಿತ. ಹಾಗಾಗಿ ನಿರ್ಜಲೀಕರಣ ತಪ್ಪಿಸಲು ಬೇಕಾಗಿ, ಚೆನ್ನಾಗಿ ನೀರು ಕುಡಿಯಲೇಬೇಕು.

Leave a Reply

Your email address will not be published. Required fields are marked *

error: Content is protected !!