ಉದಯವಾಹಿನಿ, ವಿಜಯಪುರ: ನಮ್ಮ ದೇಶದಲ್ಲಿ ಬಾಂಗ್ಲಾ ವಲಸಿಗರು, ರೊಹಿಂಗ್ಯಾಗಳು ಬಹಳ ಜನರಿದ್ದಾರೆ. ಅವರೆನ್ನೆಲ್ಲ ದೇಶದಿಂದ ಹೊರಹಾಕಲು ಕೇಂದ್ರ ಸರ್ಕಾರ ಕೆಲಸ ಮಾಡ್ತಿದೆ. ಅದರಂತೆ ಕರ್ನಾಟಕದಲ್ಲಿಯೂ ಎಸ್‌ಐಆರ್ ಜಾರಿ ಆಗಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಜಾರಿಗೆ ಬಂದ ನಂತರ ಈ ವಲಸಿಗರು ಹಾಗೂ ರೊಹಿಂಗ್ಯಾಗಳಿಗೆ ತೊಂದರೆ ಆಗಿದೆ. ಇವರ ಜೊತೆಗೆ ಇವರಿಗೆ ಸಹಕಾರ, ಬೆಂಬಲ ನೀಡುವವರನ್ನು ದೇಶ ಬಿಟ್ಟು ಹೊರಹಾಕಬೇಕು. ನಮ್ಮ ರಾಜ್ಯದಲ್ಲೂ ಇಂತಹವರು ಅನೇಕರು ಇದ್ದಾರೆ. ಕರ್ನಾಟಕದಲ್ಲಿಯೂ ಎಸ್‌ಐಆರ್ ಜಾರಿ ಆಗಬೇಕು. ಇಲ್ಲಿಗೆ ವಲಸೆ ಬಂದು ಅವರು ಇಲ್ಲಿ ಮತದಾರರಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ವಿಜಯಪುರದಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಜನ ಈ ತರಹದ ಕಳ್ಳರಿದ್ದಾರೆ. ಈ ನಕಲಿ ಮತದಾರರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದೇನೆ. ಒಬ್ಬ ಸಲೀಂ ಅಂತಾ ಮೂರು ವೋಟರ್ ಐಡಿ ಮಾಡಿಕೊಂಡಿಸಿದ್ದಾನೆ. ಅವನ ಮೂರು ವೋಟರ್ ಐಡಿಯಲ್ಲಿ ಫೋಟೋ ಒಂದೇ ಇದೆ. ಆದರೆ ಒಂದೊಂದು ವೋಟರ್ ಐಡಿಯಲ್ಲಿ ಒಂದೊಂದು ಶಬ್ದಗಳ ಅಕ್ಷರಗಳಲ್ಲಿ ವ್ಯತ್ಯಾಸ ಮಾಡಲಾಗಿದೆ ಎಂದು ದೂರಿದ್ದಾರೆ.

ಚಿತ್ರದುರ್ಗದ ಬಸ್ ದುರಂತ ವಿಚಾರವಾಗಿ ಮಾತನಾಡಿದ ಅವರು, ಈ ದುರಂತ ಬಹಳ ದುಃಖ ತಂದಿದೆ. ಈ ರೀತಿ ಅನೇಕ ಬೆಂಕಿ ದುರಂತಗಳು ಆಗ್ತಿವೆ. ಹೀಗೆ ಅಮಾಯಕರ ಸಜೀವ ದಹನ ಆಗುತ್ತಿರುವುದು ದುಃಖದ ಸಂಗತಿ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಈ ರೀತಿ ಅವಘಡಗಳು ಏಕೆ ಆಗ್ತಿವೆ, ಬೆಂಕಿ ಅವಘಢದ ಬಗ್ಗೆ ಪತ್ತೆ ಹಚ್ಚಬೇಕು. ವಾಹನಗಳ ಕಂಪನಿಗಳು ಇದರ ಬಗ್ಗೆ ಮುಂಜಾಗೃತೆಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ದುರಂತದಲ್ಲಿ ಸಾವಿಗೀಡಾದ ಕುಟುಂಬಗಳಿಗೆ ದು:ಖ ಭರಿಸುವ ಶಕ್ತಿ ಭಗವಂತ ನೀಡಿಲಿ ಸಂತಾಪ ಸೂಚಿಸಿದರು.

Leave a Reply

Your email address will not be published. Required fields are marked *

error: Content is protected !!