ಉದಯವಾಹಿನಿ, ಉತ್ತರ ಕರ್ನಾಟಕ ಕಡೆಗೆ ಹೋದರೆ ಜೋಳದ ರೊಟ್ಟಿಗಳನ್ನು ಬಿಟ್ಟರೇ ಬೇರೆ ಯಾವುದೇ ಆಹಾರವನ್ನು ತಿನ್ನವುದು ಬಹಳ ಕಡಿಮೆ. ಆದರೆ ಕೆಲವರು ಜೋಳದ ರೊಟ್ಟಿಗಳನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಗೋಧಿ ಚಪಾತಿಗಿಂತ ಜೋಳದ ರೊಟ್ಟಿ ಎಷ್ಟೋ ಒಳ್ಳೆಯದು. ಚಳಿಗಾಲದಲ್ಲಿ ಹೆಚ್ಚಾಗಿ ಈ ರೊಟ್ಟಿಗಳನ್ನು ತಿನ್ನುತ್ತಾರೆ. ಏಕೆಂದರೆ ಇದರಲ್ಲಿ ಜೀವಸತ್ವಗಳು, ಖನಿಜಗಳು, ಫೈಬರ್ಸ್‌, ಆಂಟಿ ಆಕ್ಸಿಡೆಂಟ್‌ಗಳು ಅಮೃದ್ಧವಾಗಿರುತ್ತವೆ. ಆದ್ರೆ ರೊಟ್ಟಿನ ಇವ್ರು ತಿನ್ನಲೇಬಾರದು. ಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದವರು ಅಂದರೆ ಹೊಟ್ಟೆ ನೋವು, ಆಸಿಡಿಟಿ, ಗ್ಯಾಸ್ಟ್ರಿಕ್‌ ಹಾಗೂ ಕರುಳಿನ ಸಮಸ್ಯೆಗಳು ಇರುವವರು ಜೋಳದ ರೊಟ್ಟಿಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಮಧುಮೇಹ ಅಥವಾ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಜೋಳದ ರೊಟ್ಟಿಗಳನ್ನು ಮಿತವಾಗಿ ತೆಗೆದುಕೊಳ್ಳಬೇಕು. ಜೋಳದಲ್ಲಿ ಗ್ಲೈಸೆಮಿಕ್‌ ಅಂಶ ಇರುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನ ಹೆಚ್ಚಿಸುತ್ತದೆ.
ಎದೆಯಲ್ಲಿ ಉರಿ, ಮಲಬದ್ಧತೆ ಇರುವವರು ಜೋಳದ ರೊಟ್ಟಿಗಳನ್ನು ತಿನ್ನಬಾರದು. ತೂಕ ಕಡಿಮೆ ಆಗಬೇಕು ಎನ್ನುವವರು ಜೋಳದ ರೊಟ್ಟಿಗಳನ್ನು ಆಯ್ಕೆ ಮಾಡಲೇಬಾರದು. ಏಕೆಂದರೆ ಕೆಲವು ಸಮಯದಲ್ಲಿ ಹಾನಿಯುಂಟು ಮಾಡುತ್ತದೆ ಎನ್ನಲಾಗುತ್ತದೆ. ಯಾವುದೇ ಆಹಾರವನ್ನು ಮಿತವಾಗಿ ಸೇವಿಸುವುದರಿಂದ ನಮ್ಮ ದೇಹವು ಆರೋಗ್ಯದಿಂದ ಇರುತ್ತದೆ. ಇಷ್ಟ ಎಂದುಬಿಟ್ಟು ಹೆಚ್ಚುಹೆಚ್ಚು ಆಹಾರ ಸೇವಿಸಿದರೆ ಇಲ್ಲದಿರುವ ಕಾಯಿಲೆಗಳು ಕೂಡ ಬರುವ ಸಾಧ್ಯತೆ ಇರುತ್ತದೆ. ಹಾಗೆ ಈ ಸಮಸ್ಯೆಗಳು ಇರುವವರು ರೊಟ್ಟಿ ತಿನ್ನುವಾಗ ಎಚ್ಚರಿಕೆ ವಹಿಸಿ ಅಷ್ಟೇ.

Leave a Reply

Your email address will not be published. Required fields are marked *

error: Content is protected !!