ಉದಯವಾಹಿನಿ, ವಾಷಿಂಗ್ಟನ್: ಭಾರತೀಯ ಸರಕುಗಳ ಮೇಲೆ ಹೆಚ್ಚುವರಿ ಶೇಕಡಾ 25ರಷ್ಟು ಸುಂಕಗಳನ್ನು ವಿಧಿಸಿ, ಭಾರತದ ವಿರುದ್ಧ ಸುಂಕ ಸಮರ ಘೋಷಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಡೊನಾಲ್ಡ್ ಟ್ರಂಪ್‌ಗೆ ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಇಂತಹ ಮಾತುಕತೆ ನಡೆದೇ ಇಲ್ಲ ಎಂದು ಭಾರತ ಎಷ್ಟೇ ಹೇಳಿದರೂ ಇದೀಗ ಮತ್ತೆ ಟ್ರಂಪ್ ಅದೇ ರಾಗ… ಅದೇ ಹಾಡು ಹಾಡಿದ್ದಾರೆ.ವಾಷಿಂಗ್ಟನ್‌ನ ಶ್ವೇತಭವನದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಾಗೂ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಟ್ರಂಪ್ ಮತ್ತೆ ಅದೇ ಹೇಳಿಕೆಯನ್ನು ನೀಡಿದ್ದಾರೆ. ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುತ್ತದೆ ಎಂದು ಮತ್ತೆ ಪುನರುಚ್ಚರಿಸಿರುವ ಟ್ರಂಪ್, ನಾವು ವಿಧಿಸಿದ್ದ ಹೆಚ್ಚುವರಿ ಸುಂಕಕ್ಕೆ ಭಾರತ ಮಣಿದಿದ್ದು, ಇನ್ಮುಂದೆ ರಷ್ಯಾದಿಂದ ತೈಲ ಖರೀದಿರುವುದಿಲ್ಲ. ಈಗಾಗಲೇ ಭಾರತ, ಹಂತ ಹಂತವಾಗಿ ಆಮದು ಪ್ರಮಾಣವನ್ನು ಕಡಿಮೆ ಮಾಡುತ್ತಿದ್ದು, ಇದರಿಂದ ರಷ್ಯಾ ತನ್ನ ಅತೀ ದೊಡ್ಡ ತೈಲ ಗ್ರಾಹಕನನ್ನು ಕಳೆದುಕೊಂಡಿದೆ ಎಂದು ಹೇಳಿದೆ. ಭಾರತ ಸುಮಾರು ಶೇ.40ರಷ್ಟು ತೈಲವನ್ನು ಖರೀದಿಸುತ್ತಿತ್ತು. ಆದರೀಗ ಅಮೆರಿಕ ವಿಧಿಸಿದ ಹೆಚ್ಚುವರಿ ಸುಂಕ ಕಾರಣದಿಂದಾಗಿ ರಷ್ಯಾದೊಂದಿಗೆ ತೈಲ ವ್ಯವಹಾರವನ್ನು ಭಾರತ ನಿಲ್ಲಿಸಿದ್ದು, ಇದರಿಂದ ರಷ್ಯಾಕ್ಕೆ ಪ್ರಮುಖ ಆದಾಯ ಮೂಲವೇ ಮುಚ್ಚಿ ಹೋಗಿದೆ. ಅಲ್ಲದೇ ಭಾರತ ತೈಲ ಖರೀದಿ ನಿಲ್ಲಿಸಿದ್ದರೆ ರಷ್ಯಾದ ಆರ್ಥಿಕತೆಗೆ ಪೆಟ್ಟು ಬೀಳಲಿದೆ ಎಂದಿದ್ದಾರೆ.
ಮುಂದುವರಿದು ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುತ್ತದೆ ಎಂದು ಸ್ವತ: ಪ್ರಧಾನಿ ಮೋದಿಯವರೇ ಭರವಸೆ ನೀಡಿದ್ದಾರೆ. ಶೀಘ್ರವಾಗಿ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ . ಆದರೆ ಮುಂದಿನ ದಿನಗಳಲ್ಲಿ ಖಂಡಿತ ಈ ಕ್ರಮವನ್ನು ನಾವು ಅನುಸರಿಸುತ್ತೇವೆ ಎಂದಿದ್ದು, ಭಾರತದ ಈ ದಿಟ್ಟ ಹೆಜ್ಜೆ ಯುದ್ದವನ್ನು ನಿಲ್ಲಿಸುವಲ್ಲಿ ಸಹಕಾರಯಾಗಲಿದೆ ಎಂದು ಹೇಳಿದ್ದಾರೆ.
