ಉದಯವಾಹಿನಿ, ವಾರ್ಸಾ: ಬಾಲಕಿಯೊಬ್ಬಳು 15ನೇ ವಯಸ್ಸಿನಲ್ಲಿ ಗೃಗ ಬಂಧನಕ್ಕೆ ಒಳಗಾಗಿದ್ದು, ಇದೀಗ ಆಕೆಯ 42ನೇ ವಯಸ್ಸಿನಲ್ಲಿ ಆಕೆಯನ್ನು ರಕ್ಷಿಸಲ್ಪಟ್ಟ ಹೃದಯ ವಿದ್ರಾವಕ ಘಟನೆಯು ಪೋಲೆಂಡ್‍ನ ಸ್ವಿಯೆಟೊಕ್ಲೋವಿಸ್‌ನಲ್ಲಿ ನಡೆದಿದೆ. ದೀರ್ಘಕಾಲದ ಬಂಧನದ ನಂತರ ಪ್ರಕರಣ ಬೆಳಕಿಗೆ ಬಂದಿದೆ. 42 ವರ್ಷದ ಮಹಿಳೆಯೊಬ್ಬರು ಸುಮಾರು ಮೂರು ದಶಕಗಳ ಕಾಲ ತಮ್ಮ ಸ್ವಂತ ಮನೆಯ ಕೋಣೆಯಲ್ಲಿ ಬಂಧಿಸಲ್ಪಟ್ಟಿದ್ದರು. 1998ರಲ್ಲಿ 15ನೇ ವಯಸ್ಸಿನಲ್ಲಿ ಕೊನೆಯ ಬಾರಿಗೆ ಹೊರಗಿನ ಪ್ರಪಂಚಕ್ಕೆ ಕಾಣಿಸಿಕೊಂಡಿದ್ದ ಮಿರೆಲಾ, ಈ ವರ್ಷದ ಜುಲೈನಲ್ಲಿ ಕೌಟುಂಬಿಕ ಕಲಹದ ಕುರಿತು ಪೊಲೀಸರಿಗೆ ದೂರು ನೀಡಿದ ನಂತರ ಪತ್ತೆಯಾಗಿದ್ದರು
ನಿವಾಸಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ದಿಗ್ಭ್ರಮೆಗೊಂಡಿದ್ದರು. ಮಿರೆಲಾಳ ಕೋಣೆಯು ಮಗುವಿನ ರೂಮ್‌ನಂತೆ ಇತ್ತು. ಸಣ್ಣ ಹಾಸಿಗೆ, ಚದುರಿದ ಆಟಿಕೆಗಳು ಮತ್ತು ಹೂವಿನ ಆಕಾರದ ಮೇಜು ಇತ್ತು. ಮಕ್ಕಳಿಗೆ ಬೇಕಾದ ಆಟಿಕೆಗಳು ಅಲ್ಲಿದ್ದರೂ, ಇದೀಗ ಆಕೆಗೆ 42 ವರ್ಷ ವಯಸ್ಸಾಗಿದ್ದು, ತೀವ್ರ ಅಪೌಷ್ಟಿಕತೆಯಿಂದ ದುರ್ಬಲಳಾಗಿದ್ದಳು.
ಆಕಸ್ಮಿಕವಾಗಿ ಆಕೆಯ ವಿಚಾರ ಗೊತ್ತಾಗಿದ್ದರಿಂದ ಅದೃಷ್ಟವಶಾತ್ ಬದುಕುಳಿದಿದ್ದಾಳೆ. ಇನ್ನೂ ಕೆಲವು ದಿನಗಳವರೆಗೆ ಗೊತ್ತಾಗದೇ ಇದ್ದಿದ್ದರೆ ಆಕೆ ಬದುಕುಳಿಯುವುದೇ ಕಷ್ಟವಾಗಿತ್ತು. ಮೂರು ದಶಕಗಳ ಕಾಲ ಕೋಣೆಯಲ್ಲಿ ಬಂಧನದಲ್ಲಿದ್ದ ಕಾರಣ ಮಿರೆಲಾಗೆ ನಡೆಯುವುದಂತೂ ಕಷ್ಟ. ನಿಲ್ಲಲೂ ಆಗುವುದಿಲ್ಲ ಮತ್ತು ಆಕೆಯ ಕಾಲುಗಳು ಊದಿಕೊಂಡಿದ್ದವು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
