ಉದಯವಾಹಿನಿ , ಬೆಂಗಳೂರು: ಸರ್ಕಾರದ ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ಭಾಗವಹಿಸಿದ್ದಾರೆ.ಅಶೋಕ್ ಅವರ ಜಾಲಹಳ್ಳಿಯ ನಿವಾಸಕ್ಕೆ ಗಣತಿದಾರರು ಆಗಮಿಸಿದ್ದಾರೆ. ಈ ವೇಳೆ ತಮ್ಮ ಹಾಗೂ ಕುಟುಂಬಸ್ಥರ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಕೆಲ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡಿಲ್ಲ. ಸಮೀಕ್ಷೆಯಲ್ಲಿ ಪಾಲ್ಗೊಂಡ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಅಶೋಕ್ ಬಹಿರಂಗಗೊಳಿಸಿಲ್ಲ. ಒಕ್ಕಲಿಗ ಸಮಾಜದ ಪ್ರಭಾವಿ ನಾಯಕರಾಗಿರುವ ಅಶೋಕ್ ಅವರು ಸಮಾಜ ಜಾತಿಗಣತಿ ವಿಚಾರದ ಬಗ್ಗೆ ಆಯೋಜಿಸಿದ್ದ ಸಭೆಯಲ್ಲಿ ಈ ಹಿಂದೆ ಭಾಗವಹಿಸಿದ್ದರು. ಈ ಸಭೆಯಲ್ಲಿ ಜಾತಿಗಳಿಗೆ ಕ್ರಿಶ್ಚಿಯನ್ ಸೇರಿಸಿರುವುದನ್ನ ಕೈ ಬಿಡಬೇಕು. ಸಮುದಾಯದ ಎಲ್ಲರೂ ಒಕ್ಕಲಿಗ ಎಂದೇ ಜಾತಿ ಬರೆಸಬೇಕು ಎಂಬ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.
