ಉದಯವಾಹಿನಿ , ಜೈಪುರ: ರೈಲ್ವೆ ಪ್ರಯಾಣ ಇದೀಗ ಆಕರ್ಷಕ ಜತೆಗೆ ಮತ್ತಷ್ಟು ಆರಾಮದಾಯಕವಾಗಲಿದೆ. ಭಾರತೀಯ ರೈಲ್ವೆಯು ಹೊಸ ಸೌಕರ್ಯವನ್ನು ಪರಿಚಯಿಸುತ್ತಿದ್ದು, ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರಾಜಸ್ಥಾನದ ಪರಂಪರೆಯ ಸಂಗನೆರಿ ಮುದ್ರಣ ಹೊಂದಿರುವ ಹೊಸ ಬ್ಲಾಂಕೇಟ್‌ ಗಳನ್ನು ನೀಡಲಿದೆ.ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಯಪುರದ ಖಾತಿಪುರಾ ರೈಲ್ವೆ ನಿಲ್ದಾಣದಲ್ಲಿ ಆರಂಭಿಸಲಾಗಿದೆ. ಕೆಲ ಆಯ್ದ ರೈಲುಗಳಲ್ಲಿ ಇದನ್ನು ಪರೀಕ್ಷಿಸಿದ ಬಳಿಕ, ದೇಶಾದ್ಯಂತೆ ಈ ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಸ್ವಚ್ಛತೆ ಮತ್ತು ಕಲಾತ್ಮಕ ಸ್ಪರ್ಶ
ಹಿಂದಿನ ಬಿಳಿ ಬ್ಲಾಂಕೆಟ್‌ಗಳ ಅಸ್ವಚ್ಛತೆಯ ಬಗ್ಗೆ ಪ್ರಯಾಣಿಕರಿಂದ ದೂರುಗಳು ಬಂದ ಹಿನ್ನೆಲೆ ಈ ಹೊಸ ಸೌಲಭ್ಯ ಕೈಗೊಳ್ಳಲಾಗಿದೆ. ಮೊದಲ ದಿನವೇ, ರಾತ್ರಿ 8:45ಕ್ಕೆ ಹೊರಟ ಜಯಪುರ–ಅಹಮದಾಬಾದ್ (ಅಸರ್ವಾ) ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ಈ ಹೊಸ ಸಂಗನೆರಿ ಮುದ್ರಣ ಹೊಂದಿರುವ ಕವರ್‌ಗಳನ್ನು ನೀಡಲಾಗಿದೆ.
ಸಂಸ್ಕೃತಿಯ ಅನಾವರಣಕ್ಕೆ ವೇದಿಕೆಯಾದ ರೈಲ್ವೆ ಈ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತೊಳೆಯಬಹುದಾದ ಈ ಹೊಸ ಬ್ಲಾಂಕೆಟ್‌ಗಳು, ದೀರ್ಘಕಾಲಿಕವಾಗಿ ಬಳಕೆ ಮಾಡಬಹುದಾಗಿದೆ ಮತ್ತು ನಿರ್ವಹಣೆಯೂ ಸುಲಭ. ನಮ್ಮ ಮನೆಯಲ್ಲಿ ಹೇಗೆ ಕವರ್ ಹಾಕಿದ ಬ್ಲಾಂಕೆಟ್‌ಗಳನ್ನು ಬಳಸುತ್ತೇವೋ, ಅದೇ ಅನುಭವ ರೈಲ್ವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ” ಎಂದರು.

 

Leave a Reply

Your email address will not be published. Required fields are marked *

error: Content is protected !!