ಉದಯವಾಹಿನಿ , ನವದೆಹಲಿ: ಚಲಿಸುತ್ತಿರುವ ಲೋಕಲ್ ರೈಲಿನ ಬಾಗಿಲಿನಲ್ಲಿ ನಿಂತುಕೊಂಡ ವೃದ್ಧೆಯೊಬ್ಬರು ಪಕ್ಕದ ಹಳಿಯಲ್ಲಿ ಸಂಚರಿಸುತ್ತಿದ್ದ ರೈಲಿಗೆ ದೊಡ್ಡ ಕಲ್ಲನ್ನು ಎಸೆದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿರುವ ಈ ವಿಡಿಯೊ (Viral Video) ಆಘಾತ ಮತ್ತು ಗೊಂದಲವನ್ನುಂಟು ಮಾಡಿದೆ. ಅನೇಕ ಬಳಕೆದಾರರು ಈ ಘಟನೆ ಮುಂಬೈಯಲ್ಲಿ ನಡೆದಿದೆ ಎಂದು ಹೇಳಿದ್ದಾರೆ. ಆದರೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈ ವಿಡಿಯೊ ಮುಂಬೈಯದ್ದಲ್ಲ ಎಂದು ತಿಳಿದುಬಂದಿದೆ.

ವೈರಲ್ ಆಗಿರುವ ಈ ವಿಡಿಯೊದಲ್ಲಿ, ಮಹಿಳೆಯು ದೊಡ್ಡ ಕಲ್ಲನ್ನು ಹಿಡಿದುಕೊಂಡು ಪಕ್ಕದ ಹಳಿಯಲ್ಲಿ ಬರುತ್ತಿರುವ ರೈಲಿನ ಮೋಟಾರ್‌ಮ್ಯಾನ್‌ನ ಕ್ಯಾಬಿನ್‌ಗೆ ಗುರಿಯಿಟ್ಟುಕೊಂಡಿರುವುದು ಕಂಡು ಬಂದಿದೆ. ಕಲ್ಲು ಎಸೆದ ನಂತರ, ಅವಳು ಹಾದುಹೋಗುವ ರೈಲಿಗೆ ಕೂಗುತ್ತಿರುವುದು ಕಂಡುಬಂದಿದೆ. ಆದರೂ ಅವಳ ಮಾತುಗಳು ಕೇಳಿಸುವುದಿಲ್ಲ. ಈ ಆತಂಕಕಾರಿ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಹಲವಾರು ಬಳಕೆದಾರರು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವೈರಲ್ ಆದ ಪೋಸ್ಟ್‌ಗಳಿಂದ ಆರಂಭದಲ್ಲಿ ದಾರಿತಪ್ಪಿದ್ದ ಮುಂಬೈ ಪೊಲೀಸ್ ಅಧಿಕೃತ ಖಾತೆಯು ಸಹ, ತನಿಖೆಗಾಗಿ X (ಹಿಂದೆ ಟ್ವಿಟರ್)ನಲ್ಲಿ ಮುಂಬೈ ಸರ್ಕಾರಿ ರೈಲ್ವೆ ಪೊಲೀಸ್ (GRP) ಅನ್ನು ಟ್ಯಾಗ್ ಮಾಡಿತು. ಆದರೆ ಬಳಿಕ ಈ ಘಟನೆ ನಡೆದಿದ್ದು, ಮುಂಬೈಯಲ್ಲಿ ಅಲ್ಲ ಎಂದು ತಿಳಿದುಬಂದಿದೆ. ಆಕೆ ತನಗೆ ಸಿಕ್ಕ ಅತಿದೊಡ್ಡ ಕಲ್ಲನ್ನು ಹಿಡಿದು ಲೋಕೋಮೋಟಿವ್ ಚಾಲಕನ ಕ್ಯಾಬಿನ್ ಮೇಲೆ ಎಸೆದಿದ್ದಾಳೆ. ಆಕೆ ಆ ರೀತಿ ಕಲ್ಲೆಸೆಯಲು ಕಾರಣವೇನಿರಬಹುದು ಎಂಬುದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!