ಉದಯವಾಹಿನಿ , ಗುಲ್ಷನ್ ದೇವಯ್ಯ, ಬಾಲಿವುಡ್ನಲ್ಲಿ ಹೆಸರು ಮಾಡಿರುವ ಕನ್ನಡದ ನಟ. ಇತ್ತೀಚೆಗೆ ಬಿಡುಗಡೆ ಆಗಿ ಭಾರಿ ಯಶಸ್ಸು ಕಾಣುತ್ತಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ಕುಲಶೇಖರನ ಪಾತ್ರದಲ್ಲಿ ಸಖತ್ ಆಗಿ ನಟಿಸಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಬರುವ ಮುಂಚೆ ಎಷ್ಟೋ ಜನರಿಗೆ ಗುಲ್ಷನ್ ದೇವಯ್ಯ ಅಪ್ಪಟ ಕನ್ನಡದ ನಟ ಎಂಬುದು ಗೊತ್ತೆ ಇರಲಿಲ್ಲ. ಗುಲ್ಷನ್, ಹಿಂದಿಯಲ್ಲಿ ಹಲವು ಅದ್ಭುತ ನಿರ್ದೇಶಕರು, ನಟರುಗಳೊಟ್ಟಿಗೆ ಕೆಲಸ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಗುಲ್ಷನ್ ಅವರು ಶಾರುಖ್ ಖಾನ್ ಮನೆಗೆ ಪಾರ್ಟಿಗೆ ಹೋಗಿದ್ದಾಗ ತಮಗೆ ಆದ ಅನುಭವದ ಬಗ್ಗೆ ಮಾತನಾಡಿದ್ದಾರೆ.
ಶಾರುಖ್ ಖಾನ್ ಆತಿಥ್ಯದ ಬಗ್ಗೆ ಬಾಲಿವುಡ್ ನಲ್ಲಿ ಬಹಳ ಹೆಮ್ಮೆಯಿಂದ ಮಾತನಾಡಿಕೊಳ್ಳುತ್ತಾರೆ. ಶಾರುಖ್ ಖಾನ್ ಮನೆಗೆ ಹೋದರೆ ಅತಿಥಿಗಳನ್ನು ಬಲು ಗೌರವದಿಂದ ನೋಡಿಕೊಳ್ಳುತ್ತಾರೆ. ಶಾರುಖ್ ಖಾನ್ ಪ್ರತಿಯೊಬ್ಬರನ್ನು ಬಲು ಆತ್ಮೀಯತೆಯಿಂದ ಮಾತನಾಡಿಸುತ್ತಾರೆ ಎನ್ನಲಾಗುತ್ತದೆ. ಶಾರುಖ್ ಖಾನ್ ಮನೆಯ ಪಾರ್ಟಿ ಅಟೆಂಡ್ ಮಾಡುವುದು ಬಾಲಿವುಡ್ನ ಹಲವರ ಪಾಲಿಗೆ ಗೌರವದ ವಿಚಾರವೇ ಆಗಿದೆ. ಅಂಥಹಾ ಒಂದು ಪಾರ್ಟಿಯಲ್ಲಿ ಗುಲ್ಷನ್ ದೇವಯ್ಯ ಭಾಗಿ ಆಗಿದ್ದರಂತೆ.
ಗುಲ್ಷನ್ ದೇವಯ್ಯ ಅವರು ಒಮ್ಮೆ ಶಾರುಖ್ ಖಾನ್ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಭಾಗಿ ಆಗಿದ್ದರಂತೆ. ಸುಮಾರು ಮೂರು ಗಂಟೆಗಳ ಕಾಲ ಅವರು ಅಲ್ಲಿದ್ದರಂತೆ. ಆದರೆ ಅಲ್ಲಿದ್ದ ಅಷ್ಟೂ ಹೊತ್ತು ನಾನು ಇಲ್ಲಿಗೇಕೆ ಬಂದೆ, ನಾನು ಇಲ್ಲಿ ಬರಬೇಕಾದ ವ್ಯಕ್ತಿ ಅಲ್ಲ. ನನ್ನ ಜಾಗ ಇದಲ್ಲ ಎಂದೇ ಅನಿಸುತ್ತಿತ್ತಂತೆ. ಗುಲ್ಷನ್ ಅವರೇ ಹೇಳಿಕೊಂಡಂತೆ. ಶಾರುಖ್ ಖಾನ್ ಅಂದು ಗುಲ್ಷನ್ ಅವರನ್ನು ಬಲು ಆತ್ಮೀಯವಾಗಿ ಮಾತನಾಡಿಸಿದರಂತೆ. ಗೌರಿ ಖಾನ್ ಸಹ ಬಲು ಆದರದಿಂದ ನೋಡಿಕೊಂಡರಂತೆ. ಆದರೂ ಸಹ ಗುಲ್ಷನ್ಗೆ ಬಹಳ ಹಿಂಜರಿಕೆ ಅಂದಿನ ಪಾರ್ಟಿಯಲ್ಲಿ ಕಾಡಿತಂತೆ.
