ಉದಯವಾಹಿನಿ, ಕ್ಯಾಲ್ಗರಿ: ಭಾರತದ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್ ಇಲ್ಲಿ ನಡೆಯುತ್ತಿರುವ ಕೆನಡಾ ಓಪನ್ ಸೂಪರ್ 500 ಬ್ಯಾಡ್ಮಿಂ ಟನ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ. ಸಿಂಧು ಅವರಿಗೆ ಜಪಾನ್ನ ನಟ್ಸುಕಿ ನಿಡೈರಾ ಅವರಿಂದ ವಾಕ್ಓವರ್ ದೊರೆತು, ಎಂಟರ ಘಟ್ಟಕ್ಕೆ ಮುನ್ನಡೆದರು. ಸೇನ್, ಬ್ರೆಜಿಲ್ನ ಇಗೊರ್ ಕೊಯೆಲೊ ಅವರನ್ನು 21–15, 21–11 ರಿಂದ ಮಣಿಸಿದರು. ಸಿಂಧು ಮುಂ ದಿನ ಸುತ್ತಿನಲ್ಲಿ 2022ರ ಇಂಡೊನೇಷ್ಯಾ ಮಾಸ್ಟರ್ಸ್ ಚಾಂಪಿಯನ್, ಚೀನಾದ ಗಾವೊ ಫಾಂಗ್ ಜೀ ಅವರ ಸವಾಲನ್ನು ಎದುರಿಸಲಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ವಿಜೇತರಾಗಿರುವ ಸೇನ್, ಬೆಲ್ಜಿಯಂನ ಜೂಲಿಯನ್ ಕರಾಜಿ ಅವರಿಗೆ ಸವಾಲೊಡ್ಡಲಿದ್ದಾರೆ. ಪುರುಷರ ಡಬಲ್ಸ್ನ ಪ್ರೀಕ್ವಾರ್ಟರ್ ಫೈನಲ್ನಲ್ಲಿ ಭಾರತದ ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಲ ಜೋ ಡಿಯುವಿಶ್ವದ 7ನೇ ರ್‍ಯಾಂಕ್ನ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿಯಾವಾನ್ ಜೋಡಿಯ ಎದುರು 9-21 11-21ರಿಂದ ಸೋಲೊಪ್ಪಿಕೊಂಡಿತು.
