ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸಭೆಯಲ್ಲಿ ಇಂದು ಸುದೀರ್ಘವಾದ ರೆಕಾರ್ಡ್ 14 ನೇ ಬಜೆಟ್ ಮಂಡಿಸಿ ತಮ್ಮ ಚೇರ್ ನಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತಾ ನೀರು ಕುಡಿಯುತ್ತಿರುವಾಗಲೇ ಕಾಂಗ್ರೆಸ್ ಪಕ್ಷದ ಸದಸ್ಯರು ಅವರಲ್ಲಿಗೆ ಬಂದು ಕೈಕುಲುಕಿ ಅಭಿನಂದಿಸಿದರು. ಅವರ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರ ಮುಖದಲ್ಲೂ ಗೆಲುವಿನ ನಗೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಮುಖ್ಯಮಂತ್ರಿಯವರ ಕೈ ಕುಲುಕಿ ಅಭಿನಂದನೆ ಸಲ್ಲಿಸಿದರು. ಸಚಿವರಾಗಿರುವ ಹೆಚ್ ಕೆ ಪಾಟೀಲ್, ಕೆ ಹೆಚ್ ಮುನಿಯಪ್ಪ, ಎಂಬಿ ಪಾಟೀಲ್, ಈಶ್ವರ್ ಖಂಡ್ರೆ, ಜಿ ಪರಮೇಶ್ವರ್, ದಿನೇಶ್ ಗುಂಡೂರಾವ್, ರಹೀಂ ಖಾನ್, ಹೆಚ್ ಸಿ ಮಹಾದೇವಪ್ಪ ಮೊದಲಾದವರೆಲ್ಲ ಮುಖ್ಯಮಂತ್ರಿಯನ್ನು ಅಭಿನಂದಿಸಿದರು.
