ಉದಯವಾಹಿನಿ, ಪ್ಯಾರಿಸ್, : ಅನೇಕ ಬಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲಿ ಹಣ ದರೋಡೆ ಘಟನೆಗಳನ್ನು ನೋಡಿದ್ದೇವೆ. ನಿಜ ಜೀವನದಲ್ಲೂ ಹಲವು ಘಟನೆಗಳು ನಡೆದಿವೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಗರದಲ್ಲಿ ಇಂದು ಭಾನುವಾರ ಬೆಳ್ಳಂಬೆಳಗ್ಗೆಯೇ ಭಾರೀ ಅಮೂಲ್ಯ ವಸ್ತುಗಳ ಕಳ್ಳತನ ಆಗಿದೆ. ಫ್ರಾನ್ಸ್​ನ ಬಹಳ ಜನಪ್ರಿಯವಾದ ಲೂವ್ರ ಮ್ಯೂಸಿಯಂನಲ್ಲಿ ನೆಪೋಲಿಯನ್ ದೊರೆಯ ಕುಟುಂಬಕ್ಕೆ ಸೇರಿದ ಕೆಲ ಆಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕೇವಲ ಏಳು ನಿಮಿಷದೊಳಗೆ ಕಳ್ಳರ ಕರಾಮತ್ತು ನಡೆದುಹೋಗಿದೆ.
ಲೂವ್ರ ಮ್ಯೂಸಿಯಂ ವಿಶ್ವದ ಅತಿ ದೊಡ್ಡ ಮತ್ತು ಜನಪ್ರಿಯ ಮ್ಯೂಸಿಯಂಗಳಲ್ಲಿ ಒಂದು. ಇಲ್ಲಿ ತೀವ್ರ ಭದ್ರತಾ ವ್ಯವಸ್ಥೆ ಇರುತ್ತದೆ. ಆದರೆ, ಕಳ್ಳರು ಬಹಳ ಸುಲಭವಾಗಿ ಆಭರಣ ಕದ್ದು ಹೋಗಿರುವುದು ಆಶ್ಚರ್ಯ ಮೂಡಿಸಿದೆ. ವರದಿಗಳ ಪ್ರಕಾರ ಮೂರು ಅಥವಾ ನಾಲ್ವರು ವ್ಯಕ್ತಿಗಳಿರುವ ತಂಡವೊಂದು ಈ ಕೆಲಸ ಮಾಡಿದೆ.
ಲೂವ್ರ ಮ್ಯೂಸಿಯಂನಲ್ಲಿ ಭಾಗವಾದ ಅಪೋಲೋ ಗ್ಯಾಲರಿಯಲ್ಲಿ ನೆಪೋಲಿಯನ್ ಮತ್ತು ರಾಣಿಯ ಆಭರಣಗಳು ಸೇರಿದಂತೆ ಅಮೂಲ್ಯ ವಸ್ತುಗಳ ಪ್ರದರ್ಶನ ಹಾಕಲಾಗಿರುತ್ತದೆ. ಒಂದು ಭಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿರುತ್ತದೆ. ಸ್ಕೂಟರ್​ನಲ್ಲಿ ಬಂದ ಕಳ್ಳರು ಬ್ಯಾಸ್ಕೆಟ್ ಲಿಫ್ಟ್ ಮೂಲಕ ಅಲ್ಲಿಂದ ಅಪೋಲೊ ಗ್ಯಾಲರಿಯನ್ನು ತಲುಪುತ್ತಾರೆ. ತಮ್ಮೊಂದೊಗೆ ತಂದಿದ್ದ ಡಿಸ್ಕ್ ಕಟ್ಟರ್​ಗಳ ನೆರವಿನಿಂದ ಕಿಟಕಿಯನ್ನು ಛೇದಿಸಿ ಒಳಗೆ ಪ್ರವೇಶ ಮಾಡುತ್ತಾರೆ.

Leave a Reply

Your email address will not be published. Required fields are marked *

error: Content is protected !!