ಉದಯವಾಹಿನಿ, ಪೋರ್ಚುಗಲ್: ಸಾರ್ವಜನಿಕ ಸ್ಥಳಗಳಲ್ಲಿ  ಬುರ್ಖಾ ), ನಿಕಾಬ್‌ನಂತಹ  ಧಾರ್ಮಿಕ ಬಟ್ಟೆ  ಹಾಕಿಕೊಂಡು ಓಡಾಡಿದ್ರೆ ಹುಷಾರ್! ಬರೋಬ್ಬರಿ 4 ಲಕ್ಷ ರೂಪಾಯಿ ದಂಡ ಕಟ್ಟಬೇಕಾಗುತ್ತದೆ! ಇಂಥದ್ದೊಂದು ಕಠಿಣ ನಿಯಮ ಪೋರ್ಚುಗಲ್‌ನಲ್ಲಿ (Portugal) ಜಾರಿಗೆ ಬರಲಿದೆ. ಪೋರ್ಚುಗಲ್ ಸಂಸತ್ತು (Portuguese parliament) ಹೆಚ್ಚಿನ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಮತ್ತು ನಿಖಾಬ್‌ಗಳಂತಹ (Bill) ಮುಸುಕುಗಳನ್ನು ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿತು. ಈ ಕ್ರಮವು ಲಿಂಗ ಸಮಾನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.
ಪೋರ್ಚುಗಲ್ ಸಂಸತ್ತು ಹೊಸದೊಂದು ಕಠಿಣ ಕಾನೂನು ತರಲು ಸಜ್ಜಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಲಿಂಗ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುವ ಬುರ್ಖಾ, ನಿಕಾಬ್‌ನಂತಹ ಮೇಲು ವಸ್ತ್ರಗಳನ್ನು ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿದೆ. ಈ ಮಸೂದೆಯನ್ನು ತೀವ್ರ ಬಲಪಂಥೀಯ ಚೆಗಾ ಪಕ್ಷವು ಪ್ರಸ್ತಾಪಿಸಿದ್ದು, ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾ ಮತ್ತು ನಿಖಾಬ್‌ಗಳನ್ನು ನಿಷೇಧಿಸಬೇಕು ಎಂಬ ಬೇಡಿಕೆ ಇಟ್ಟಿತ್ತು.
ಕೆಲವು ಕಡೆಗಳಲ್ಲಿ ಮಾತ್ರ ಬುರ್ಖಾ ಧರಿಸಲು ಅವಕಾಶ

ವಿಮಾನಗಳು, ರಾಜತಾಂತ್ರಿಕ ಆವರಣಗಳು ಮತ್ತು ಪೂಜಾ ಸ್ಥಳಗಳಲ್ಲಿ ಮುಖ ಮುಸುಕು ಧರಿಸಲು ಇನ್ನೂ ಅವಕಾಶವಿದೆ. ಮಸೂದೆ ಕಾನೂನಾಗಲು ಪೋರ್ಚುಗಲ್ ಅಧ್ಯಕ್ಷರ ಒಪ್ಪಿಗೆ ಇನ್ನೂ ಬಾಕಿ ಇದೆ. ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ ಸೌಸಾ ಇನ್ನೂ ಮಸೂದೆಯನ್ನು ವೀಟೋ ಮಾಡಬಹುದು ಅಥವಾ ಪರಿಶೀಲನೆಗಾಗಿ ಸಾಂವಿಧಾನಿಕ ನ್ಯಾಯಾಲಯಕ್ಕೆ ಕಳುಹಿಸಬಹುದು.

Leave a Reply

Your email address will not be published. Required fields are marked *

error: Content is protected !!