ಉದಯವಾಹಿನಿ, ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ ಅಮಿತ್​ ಶಾ ಅವರಿಗೆ ಈ ದಿನದಂದು ಶುಭಾಶಯಗಳ ಮಹಾಪೂರೇ ಹರಿದುಬಂದಿದೆ. ಇತ್ತ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು ಗೃಹ ಸಚಿವ ಅಮಿತ್ ಶಾ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಅಮಿತ್​ ಶಾ ಅವರಿಗೆ ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸಿದ ಕಾರ್ಯಗಳಿಗಾಗಿ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ತಮ್ಮ ಶುಭಾಶಯ ಸಂದೇಶದಲ್ಲಿ, “ಗೃಹ ಸಚಿವ ಅಮಿತ್ ಶಾ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರ ಸಾರ್ವಜನಿಕ ಸೇವೆಗೆ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಎಲ್ಲರೂ ಅವರನ್ನು ಮೆಚ್ಚುತ್ತಾರೆ. ಭಾರತದ ಆಂತರಿಕ ಭದ್ರತೆಯನ್ನು ಗಟ್ಟಿಗೊಳಿಸಲು ಮತ್ತು ಪ್ರತಿಯೊಬ್ಬ ಭಾರತೀಯನಿಗೆ ಸುರಕ್ಷಿತ, ಘನತೆಯ ಜೀವನವನ್ನು ಖಾತ್ರಿಪಡಿಸಲು ಅವರು ಶ್ಲಾಘನೀಯ ಕೆಲಸ ಮಾಡಿದ್ದಾರೆ. ಅವರ ಆರೋಗ್ಯಕರ, ದೀರ್ಘ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ” ಎಂದು ಶುಭ ಕೋರಿದ್ದಾರೆ.
ಅಮಿತ್ ಶಾ, ಭಾರತದ ಗೃಹ ಸಚಿವರಾಗಿ, ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಿಂದ ಲೇಖನ 370 ರದ್ದತಿಯಿಂದ ಹಿಡಿದು, ಭಯೋತ್ಪಾದನೆ ವಿರುದ್ಧದ ಕಟ್ಟುನಿಟ್ಟಾದ ಕಾನೂನುಗಳಿಗೆ ಅವರ ಕೊಡುಗೆ ಗಮನಾರ್ಹವಾಗಿದೆ. ಅಮಿತ್ ಶಾ ಪೂರ್ಣ ಹೆಸರು ಅಮಿತ್ ಅನಿಲ್ ಚಂದ್ರ ಶಾ. 1963 ಅಕ್ಟೋಬರ್ 22 ರಂದು ಜನಿಸಿದರು.
ಶಾಲಾ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಆರ್ ಎಸ್ ಎಸ್ ಕಡೆಗೆ ಒಲವು ಹೊಂದಿದ್ದ ಅವರು, ಆಗ ಆರ್ ಎಸ್ ಎಸ್ ವತಿಯಿಂದ ಕೈಗೊಳ್ಳಲಾಗುತ್ತಿದ್ದ ಎಲ್ಲಾ ಕಾರ್ಯಕ್ರಮಗಳಿಗೆ ತಪ್ಪದೇ ಹಾಜರಾಗುತ್ತಿದ್ದರು. ಆನಂತರ, ಕಾಲೇಜು ದಿನಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ (ಎಬಿಪಿವಿ) ತಮ್ಮನ್ನು ತೊಡದಗಿಸಿಕೊಂಡರು. ಆಗಲೇ ಅಮಿತ್ ಶಾ ಅವರಿಗೆ, ನರೇಂದ್ರ ಮೋದಿಯವರು ಮೊದಲು ಪರಿಚಯವಾಗಿದ್ದು. ಆಗ, ಮೋದಿಯವರು ಆರ್ ಎಸ್ ಎಸ್ ಪ್ರಚಾರಕರಾಗಿ, ಆರ್ ಎಸ್ ಎಸ್ ನ ಯುವ ಮೋರ್ಚಾದ ಮೇಲುಸ್ತುವಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. 1987ರಲ್ಲಿ ಅಮಿತ್ ಶಾ ಅವರು ಬಿಜೆಪಿಗೆ, ಮೋದಿಯವರಿಗಿಂತ ಒಂದು ವರ್ಷ ಮೊದಲೇ ಸೇರ್ಪಡೆಗೊಂಡರು.

Leave a Reply

Your email address will not be published. Required fields are marked *

error: Content is protected !!