ಉದಯವಾಹಿನಿ, ಇಸ್ಲಾಮಾಬಾದ್: ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಸ್ಥೆ ಜಮಾತ್ ಉಲ್-ಮುಮಿನತ್ ಎಂಬ ಮಹಿಳಾ ಉಗ್ರ ಘಟಕವನ್ನು ಈಗಾಗಲೇ ರಚಿಸಿದೆ. ಜಮಾತ್-ಉಲ್-ಮೊಮಿನಾತ್‌ನ ಪ್ರಧಾನ ಕಚೇರಿಯನ್ನೇ ಭಾರತ ನಾಶ ಮಾಡಿದ ಮೇಲೆ ಜೆಎಂ ಮಹಿಳೆಯರನ್ನು ಸೇರಿಸಿಕೊಂಡು ಜೈಶ್-ಎ-ಮೊಹಮ್ಮದ್ ಅತ್ಯಾಧುನಿಕ ಮಹಿಳಾ ಬ್ರಿಗೇಡ್ ಸ್ಥಾಪಿಸಿದೆ. ಮಹತ್ವದ ಬೆಳವಣಿಯಲ್ಲಿ ಉಗ್ರ ಸಂಘಟನೆಯ ಕೋರ್ಸ್ ಆನ್‌ಲೈನ್‌ನಲ್ಲಿ ಪ್ರಾರಂಭಿಸಲಾಗುತ್ತಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.
ಜಿಹಾದ್ ಮತ್ತು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದಂತೆ ಅವರ ‘ಕರ್ತವ್ಯ’ಗಳ ಬಗ್ಗೆ ಇಲ್ಲಿ ಕಲಿಸಾಗುತ್ತದೆ ಎಂದು ಹೇಳಿಕೊಂಡಿದೆಯಾದರೂ, ಉಗ್ರ ಸಂಘಟನೆ ಎಂದು ತಿಳಿದು ಬಂದಿದೆ. ಉಪನ್ಯಾಸಗಳು’ ದಿನಕ್ಕೆ 40 ನಿಮಿಷಗಳ ಕಾಲ ನಡೆಯಲಿದ್ದು, ಅಜರ್ ಅವರ ಇಬ್ಬರು ಸಹೋದರಿಯರಾದ ಸಾದಿಯಾ ಅಜರ್ ಮತ್ತು ಸಮೈರಾ ಅಜರ್ ಅವರು ಇದನ್ನು ನಡೆಸಲಿದ್ದಾರೆ. ಈ ಘಟಕಕ್ಕೆ ನೇಮಕಾತಿ ಅಕ್ಟೋಬರ್ 8 ರಂದು ಬಹವಾಲ್ಪುರದಲ್ಲಿ ಪ್ರಾರಂಭವಾಯಿತು. ಮೂಲಗಳ ಪ್ರಕಾರ, ಜೆಇಎಂನ ಮಹಿಳಾ ವಿಭಾಗವನ್ನು ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ಮುನ್ನಡೆಸಲಿದ್ದಾರೆ. ಮೇ 7 ರಂದು ಆಪರೇಷನ್ ಸಿಂಧೂರ್‌ನ ಭಾಗವಾಗಿ ನಡೆದ ದಾಳಿಯಲ್ಲಿ ಹತರಾದ ಅಜರ್‌ನ ಕುಟುಂಬ ಸದಸ್ಯರಲ್ಲಿ ಆಕೆಯ ಪತಿ ಯೂಸುಫ್ ಅಜರ್ ಕೂಡ ಒಬ್ಬ. ಭಯೋತ್ಪಾದಕ ಸಂಘಟನೆಯು ತನ್ನ ಸದಸ್ಯರ ಪತ್ನಿಯರನ್ನು ಹಾಗೂ ಬಹಾವಲ್ಪುರ್, ಕರಾಚಿ, ಮುಜಫರಾಬಾದ್, ಕೋಟ್ಲಿ, ಹರಿಪುರ್ ಮತ್ತು ಮನ್ಸೆಹ್ರಾದಲ್ಲಿರುವ ತನ್ನ ಕೇಂದ್ರಗಳಲ್ಲಿ ಓದುತ್ತಿರುವ ಆರ್ಥಿಕವಾಗಿ ದುರ್ಬಲ ಮಹಿಳೆಯರನ್ನು ಸೇರಿಸಿಕೊಳ್ಳಲು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
