ಉದಯವಾಹಿನಿ,ವಾರ್ಸಾ: ಜಗತ್ತಿನಲ್ಲಿ ಹಲವಾರು ಮಂದಿಗೆ ಏನಾದರೂ ಸಾಹಸ ಮಾಡಬೇಕು ಎಂದ ಆಸೆಯಿರುತ್ತದೆ. ಕೆಲವರು ಇದಕ್ಕಾಗಿ ಕಠಿಣ ಪರಿಶ್ರಮ ಮಟ್ಟು, ಸುರಕ್ಷತಾ ಮಾರ್ಗದರ್ಶಿಗಳನ್ನು ಅಳವಡಿಸಿಕೊಂಡು ಇಂತಹ ಸಾಹಸ ಮಾಡಲು ಮುಂದಾಗುತ್ತಾರೆ. ಆದರೆ, ಪೋಲೆಂಡ್ ದಂಪತಿಗಳೊಂದು ಅಜಾಗರೂಕತೆಯಿಂದ ತಮ್ಮ 9 ತಿಂಗಳ ಮಗುವಿನ ಸಹಿತ ಅತಿ ಎತ್ತರದ ಶಿಖರವಾದ ಮೌಂಟ್ ರೈಸಿಯನ್ನು ಹತ್ತಲು ಪ್ರಯತ್ನಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹವಾಮಾನ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿದ್ದರೂ, ಎಲ್ಲಾ ಎಚ್ಚರಿಕೆಗಳನ್ನು ಧಿಕ್ಕರಿಸಿ ಪರ್ವಾತರೋಹಣ ಮಾಡಲು ಮುಂದಾಗಿದ್ದಾರೆ. ಕೊನೆಗೆ ಇಳಿಯಲು ಸಾಧ್ಯವಾಗದೆ ತೊಂದರೆಗೊಳಗಾಗಿದ್ದಾರೆ. ಪರ್ವತ ಮಾರ್ಗದರ್ಶಿಯೊಬ್ಬರು ಮಗುವನ್ನು ರಕ್ಷಿಸಿದ್ದಾರೆ. ಈ ಘಟನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಮಗುವನ್ನು ಅಪಾಯಕ್ಕೆ ಸಿಲುಕಿಸಿದ ಪೋಷಕರ ಅಜಾಗರೂಕತೆಯನ್ನು ಅನೇಕರು ಪ್ರಶ್ನಿಸಿದ್ದಾರೆ. ರೈಸಿ ಪರ್ವತದ ಮೇಲಿನ ಪರಿಸ್ಥಿತಿಗಳು ಅಪಾಯಕಾರಿಯಾಗಿದ್ದವು. ಆದರೂ, ದಂಪತಿಗಳು ಮಾತ್ರ ಮಾರ್ಗದರ್ಶಕರು ಮತ್ತು ರಕ್ಷಕರು ಪದೇ ಪದೇ ಹೇಳಿದ್ದ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದರು. ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ, ಮಂಜುಗಟ್ಟಿದ ಶಿಖರವನ್ನು ಏರುವ ಅವರ ಪ್ರಯತ್ನವು ಅಪಾಯಕಾರಿಯಾಯಿತು. ಪತಿಗೆ ತಾನು ಕಷ್ಟವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಅರಿವಾದಾಗ, ಆತ ಪರ್ವತ ಮಾರ್ಗದರ್ಶಕರಿಂದ ಕ್ರ್ಯಾಂಪನ್‌ಗಳನ್ನು ಪಡೆಯಲು ಪ್ರಯತ್ನಿಸಿದನು. ನಂತರ ಅವನು ತಮ್ಮ ಮಗುವನ್ನು ಸುರಕ್ಷಿತವಾಗಿ ಹೊತ್ತೊಯ್ದನು.
