ಉದಯವಾಹಿನಿ, ವಾಷಿಂಗ್ಟನ್‌: ಕರಡಿಯೊಂದು ಕಸದ ಡಬ್ಬಿಯನ್ನು ಮುರಿಯಲು ಪ್ರಯತ್ನಿಸಿ ವಿಫಲವಾಗಿದ್ದು, ಕೊನೆಗೆ ಹತಾಶೆಯಿಂದ ಅದನ್ನು ಪದೇ ಪದೆ ಹೊಡೆಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಮೆರಿಕದ ಅಲಾಸ್ಕಾದಲ್ಲಿ ) ಈ ಘಟನೆ ನಡೆದಿದೆ. ಭಾರಿ ಮಳೆಯ ಸಮಯದಲ್ಲಿ ವಸತಿ ಪ್ರದೇಶದಲ್ಲಿ ನಡೆದ ಈ ಮೋಜಿನ ಘಟನೆ ವೈರಲ್ ಆಗಿದ್ದು ನೆಟ್ಟಿಗರು ಕರಡಿಯ ಚಲನವಲನ ನೋಡಿ ತಮಾಷೆಯಿಂದ ಪ್ರತಿಕ್ರಿಯಿಸಿದ್ದಾರೆ. ವಿಡಿಯೊದಲ್ಲಿ ಕರಡಿಯು ಕಸದ ತೊಟ್ಟಿಯನ್ನು ಬೀದಿಯ ಮಧ್ಯಕ್ಕೆ ಎಳೆದುಕೊಂಡು ಹೋಗಿ, ಅದನ್ನು ಉರುಳಿಸಿ, ಕಸದ ತೊಟ್ಟಿಗೆ ಸಿಪಿಆರ್ ನೀಡುವಂತೆ ತನ್ನ ಕೈಗಳಿಂದ ಬಡಿದಿದೆ. ಅನೇಕ ಪ್ರಯತ್ನಗಳ ಹೊರತಾಗಿಯೂ ಡಬ್ಬಿಯನ್ನು ಮುಚ್ಚಲ ತೆರೆದುಕೊಂಡಿಲ್ಲ. ಕರಡಿ ಆಹಾರ ಹುಡುಕಿಕೊಂಡು ಅಲೆದಾಡುವ ವೇಳೆ ಈ ಘಟನೆ ನಡೆದಿದೆ.

ಕರಡಿ ತನ್ನ ವಿಫಲ ಪ್ರಯತ್ನದ ನಂತರ ಜನರಿಗೆ ಅಥವಾ ಆಸ್ತಿಗೆ ಯಾವುದೇ ಹಾನಿ ಮಾಡದೆ ಸುರಕ್ಷಿತವಾಗಿ ಆ ಪ್ರದೇಶವನ್ನು ತೊರೆದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಕರಡಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತೆರಳಿದ್ದು ಮೋಜಿನ ಕ್ಷಣವಾಗಿತ್ತು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇದು ಕಸದ ಡಬ್ಬಿ ಕಂಪನಿಗೆ ಉತ್ತಮ ಜಾಹೀರಾತು. ಕರಡಿ ನಿರೋಧಕ ಕಸದ ಡಬ್ಬಿ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಪಾಪ ಕರಡಿ ಹಸಿದಿದೆ. ಕಸದ ತೊಟ್ಟಿಯನ್ನು ತೆರೆಯಲು ತುಂಬಾ ಪ್ರಯತ್ನಿಸುತ್ತಿದೆ ಎಂದು ಮಗದೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!