ಉದಯವಾಹಿನಿ, ಪ್ಯಾರಿಸ್‌‍ : ವಿಶ್ವದ ಅತಿ ಹೆಚ್ಚು ಭೇಟಿ ನೀಡುವ ಇಲ್ಲಿನ ವಸ್ತುಸಂಗ್ರಹಾಲಯದ ಒಳಗೆ ಕಿಟಕಿಯ ಮೂಲಕ ಒಳಬಂದು ಕಳ್ಳ ನೆಪೋಲಿಯನ್‌ ಶಿಲೆಯ ಕಿರೀಟದ ಆಭರಣವನ್ನುಕೇವಲ 4 ನಿಮಿಷದೊಳಗೆ ಕದ್ದು ಪರಾರಿಯಾಗಿದ್ದಾನೆ.
ಮೂಸಿಯಂನ ಲೌವ್ರೆಯ ಮುಂಭಾಗದ ಕಿಟಕಿಯ ಮೂಲಕ ಕಳ್ಳ ಪ್ರವೇಶಿಸಿ ಪ್ರದರ್ಶನ ಪೆಟ್ಟಿಗೆಗಳನ್ನು ಒಡೆದು ಬೆಲೆಬಾಳುವ ನೆಪೋಲಿಯನ್‌ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.ಮೂಸಿಯಂ ತೆರೆದ ಸುಮಾರು 30 ನಿಮಿಷಗಳ ನಂತರ ಹಗಲು ಹೊತ್ತಿನಲ್ಲಿ ಈ ದರೋಡೆ ನಡೆದಿದ್ದು ಕಳ್ಳನ ಕೈಚಳಕ ಆನೇಕರನ್ನು ಬೆರಗುಗೊಳಿಸಿದೆ.
ಆನೇಕ ಪ್ರೇಕ್ಷಕರು ಅತ್ಯಂತ ಹಳೆಯ ಮೂಸಿಯಂ ವೀಕ್ಷಣೆಗೆ ಒಳ ಪ್ರವೇಶಿಸಿದ್ದರು. ಭದ್ರತಾ ಸಿಬ್ಬಂದಿ ಜನಸಂದಣಿ ಹರಸಾಹಸದ ನಡುವೆ ಕಳ್ಳ ಕೇಲವ 4 ನಿಮಿಷದಲ್ಲಿ ತನ್ನ ಕೆಲಸ ಮುಗಿಸಿದ್ದಾನೆ.ಮೋನಾ ಲಿಸಾದಿಂದ ಕೇವಲ 250 ಮೀಟರ್‌ ದೂರದಲ್ಲಿ ಕಳ್ಳತನ ನಡೆದಿದೆ, ಇದನ್ನು ಸಂಸ್ಕೃತಿ ಸಚಿವೆ ರಾಚಿಡಾ ದಾತಿ ವೃತ್ತಿಪರನ ನಾಲ್ಕು ನಿಮಿಷಗಳ ಕಾರ್ಯಾಚರಣೆ ಎಂದು ಬಣ್ಣಿಸಿದ್ದಾರೆ.
ನೆಪೋಲಿಯನ್‌ನ ಪತ್ನಿ ಸಾಮ್ರಾಜ್ಞ ಯುಜೀನಿಯ ಪಚ್ಚೆ-ಸೆಟ್‌ ಸಾಮ್ರಾಜ್ಯಶಾಹಿ ಕಿರೀಟವು 1,300 ಕ್ಕೂ ಹೆಚ್ಚು ವಜ್ರಗಳನ್ನು ಹೊಂದಿದ್ದು, ಇದು ವಸ್ತುಸಂಗ್ರಹಾಲಯದ ಹೊರಗೆ ಕಂಡುಬಂದಿದೆ ಎಂದು ಫ್ರೆಂಚ್‌ ಅಧಿಕಾರಿಗಳು ತಿಳಿಸಿದ್ದಾರೆ.ಆದರೆ ಇದನ್ನು ಮುರಿದು ಕೆಲವನ್ನು ಮಾತ್ರ ದೋಚಲಾಗಿದೆ.
ಘಟನೆ ನಂತರ ಸೀನ್‌ ನದಿಯ ಉದ್ದಕೂ ಇರುವ ರಸ್ತೆಯನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಗೊಂದಲಕ್ಕೊಳಗಾದ ಪ್ರವಾಸಿಗರನ್ನು ಗಾಜಿನ ಪಿರಮಿಡ್‌ ಮತ್ತು ಪಕ್ಕದ ಅಂಗಳಗಳಿಂದ ಹೊರಗೆ ಕರೆದೊಯ್ಯುಲಾಗಿದೆ. ಬೆಳಿಗ್ಗೆ 9.30 ರ ಸುಮಾರಿಗೆ, ಹಲವಾರು ಒಳನುಗ್ಗಿದ್ದು, ಕಿಟಕಿಯನ್ನು ಬಲವಂತವಾಗಿ ಒಡೆದು, ಡಿಸ್ಕ್‌ ಕಟ್ಟರ್‌ನಿಂದ ಫಲಕಗಳನ್ನು ಕತ್ತರಿಸಿ ನೇರವಾಗಿ ಗಾಜಿನ ಪ್ರದರ್ಶನ ದೊಳಗೆ ಹೋದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.23 ವಸ್ತುಗಳ ರಾಜಮನೆತನದ ಸಂಗ್ರಹದೊಂದಿಗೆ ಸಭಾಂಗಣವನ್ನು ತಲುಪಲು ನದಿಯ ಮುಂಭಾಗದ ಬ್ಯಾಸ್ಕೆಟ್‌ ಲಿಫ್‌್ಟ ಬಳಸಿ ಹೊರಗಿನಿಂದ ಪ್ರವೇಶಿಸಿರಬೇಕು ಎಂದು ಆಂತರಿಕ ಸಚಿವ ಲಾರೆಂಟ್‌ ನುನೆಜ್‌ ಹೇಳಿದರು.
ಅವರ ಗುರಿ ಗಿಲ್ಡೆಡ್‌ ಅಪೊಲೊನ್‌ ಗ್ಯಾಲರಿಯಾಗಿತ್ತು, ಅಲ್ಲಿ ರೀಜೆಂಟ್‌‍, ಸ್ಯಾನ್ಸಿ ಮತ್ತು ಹಾರ್ಟೆನ್ಸಿಯಾ ಸೇರಿದಂತೆ ಕ್ರೌನ್‌ ಡೈಮಂಡ್ಸ್ ಅನ್ನು ಪ್ರದರ್ಶಿಸಲಾಗುತ್ತದೆ. ಕಳ್ಳರು ಎರಡು ಫಲಕ ಒಡೆದಿದ್ದಾರೆ ನಂತರ ಮೋಟಾರ್‌ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ ಎಂದು ನುನೆಜ್‌ ಹೇಳಿದರು.

Leave a Reply

Your email address will not be published. Required fields are marked *

error: Content is protected !!