ಉದಯವಾಹಿನಿ, ನಟಿ ರಶ್ಮಿಕಾ ಮಂದಣ್ಣ ಅಭಿನಯದ ʻಥಾಮಾʼ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಇತ್ತ ಅವರ ಇನ್ನೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆ ಸಿನಿಮಾದ ಸಂದರ್ಶನದ ವೇಳೆ ರಶ್ಮಿಕಾ ಹಲವಾರು ವಿಷಯದ ಬಗ್ಗೆ ಮಾತಾಡಿದ್ದಾರೆ. ಮುಖ್ಯವಾಗಿ ಲವ್, ಬ್ರೇಕಪ್‌ ಬಗ್ಗೆ ಮಾತಾಡಿರೋ ವಿಡಿಯೋ ವೈರಲ್ ಆಗ್ತಿದೆ.
ಅಂದ್ಹಾಗೆ ʻಗರ್ಲ್ಫ್ರೆಂಡ್ʼ ಸಿನಿಮಾದ ಪ್ರಮೋಷನ್ ವೇಳೆ ಆಂಕರ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಮೊದಲ ಪ್ರೀತಿ ಪರಿಶುದ್ಧನಾ? ಕೊನೆಯ ಪ್ರೀತಿ ಪರಿಶುದ್ಧನಾ? ಎಂದು ಸಹನಟ ದೀಕ್ಷಿತ್ ಶೆಟ್ಟಿಗೆ ಕೇಳಲಾದ ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ್ದಾರೆ. ರಶ್ಮಿಕಾ ಮೊದಲ ಪ್ರೀತಿಯಲ್ಲ, ಕೊನೆಯ ಪ್ರೀತಿ ಪರಿಶುದ್ಧ ಎಂದಿದ್ದಾರೆ. ಇನ್ನೂ ಮುಂದುವರಿದು ಪ್ರೀತಿ ಅಂದರೆ ಅಸೂಯೆ ಅಲ್ಲ, ಪ್ರೀತಿಯಲ್ಲಿ ಅಸೂಯೆಗೆ ಜಾಗ ಇರೋದಿಲ್ಲ. ನಾನಾ ವಿಧದ ಭಾವನೆಗಳಿಂದ ಕೂಡಿರುವ ಸುಂದರವಾದ ಅನುಭವ ʻಪ್ರೀತಿʼ ಎಂದಿದ್ದಾರೆ ನ್ಯಾಷನಲ್ ಕ್ರಶ್.
ಅಲ್ಲದೇ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ ಹುಡುಗಿಯರು ಬ್ರೇಕಪ್ ನೋವನ್ನ ಹುಡುಗರಿಗಿಂತ ಬೇಗ ಮರೆಯುತ್ತಾರೆ. ತಮ್ಮ ಜೀವನದಲ್ಲಿ ಮುಂದುವರೆಯುತ್ತಾರೆ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹುಡುಗರು ಗಡ್ಡ ಬಿಟ್ಟುಕೊಂಡು, ಧೂಮಪಾನ, ಮದ್ಯಪಾನ ಮಾಡ್ಕೊಂಡು ತಾವು ನೋವಲ್ಲಿದ್ದೇವೆ ಎಂದು ತೋರಿಸಿಕೊಳ್ಳುತ್ತಾರೆ. ಆದರೆ ಹುಡುಗಿಯರು ಹಾಗಲ್ಲ, ಅವರು ಮನದಲ್ಲಿಯೇ ನೊಂದು ಬೆಂದು ಹೋಗುತ್ತಾರೆ. ಹುಡುಗರಿಗಿಂತ ಹೆಚ್ಚಿನ ನೋವನ್ನು ಹುಡುಗಿಯರು ಅನುಭವಿಸುತ್ತಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!