ಉದಯವಾಹಿನಿ, ಶೀರ್ಷಿಕೆ ಹಾಗೂ ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಮಾರಿಗಲ್ಲು ವೆಬ್ ಸರಣಿಯ ಟ್ರೇಲರ್ ಬಿಡುಗಡೆಯಾಗಿದೆ. Zee5 ಮತ್ತು ‘ಪಿಆರ್‌ಕೆ ಪ್ರೊಡಕ್ಷನ್ಸ್’ ಜಂಟಿಯಾಗಿ ನಿರ್ಮಿಸಿರುವ ಈ ವೆಬ್ ಸೀರೀಸ್ ಇದೇ ತಿಂಗಳ 31ರಿಂದ ಪ್ರಸಾರ ಆಗಲಿದೆ. ಜೀ 5 ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಮಾರಿಗಲ್ಲು 1990ರ ದಶಕದ ಕಥೆಯಾಗಿದೆ. ಅಲ್ಲದೇ ಕದಂಬರ ಕಾಲಘಟ್ಟದ ಹಿನ್ನೆಲೆನೂ ಇಲ್ಲಿದೆ. ಈ ಮೂಲಕ ನಮ್ಮ ಮಣ್ಣಿನ ಕಥೆಯನ್ನು ಜೀ 5 ಹಾಗೂ ಪಿ.ಆರ್.ಕೆ ಪ್ರೊಡಕ್ಷನ್ ಹೇಳೋದಿಕ್ಕೆ ಹೊರಟಿದೆ.
ಶಿರಸಿ ಬಳಿಯ ಮಾರಿಗಲ್ಲು ಎಂಬ ಕಾಲ್ಪನಿಕ ಹಳ್ಳಿಯೊಂದರಲ್ಲಿ ನಡೆದ ಕಥೆಯನ್ನು ಸರಣಿಯಲ್ಲಿ ಕಟ್ಟಿಕೊಡಲಾಗಿದೆ. ಕದಂಬರ ರಾಜಧಾನಿಯಾಗಿರುವ ಬನವಾಸಿಗೆ ತನ್ನದೇ ಆದ ಪರಂಪರೆ ಹಾಗೂ ಇತಿಹಾಸವಿದೆ. ಇದು ದೊಡ್ಡ ಮನೆತನ ಎಂದು ಹೆಸರು ಪಡೆದಿದೆ. ಕದಂಬರ ಕಾಲದ ನಿಧಿಯನ್ನು ಹುಡುಕಲು ಹೊರಟ ಶಿರಸಿ ಯುವಕರ ಕಹಾನಿಯನ್ನು ಇದರಲ್ಲಿ ತೋರಿಸಲಾಗಿದೆ. ನಂಬಿಕೆ, ಸ್ವಾರ್ಥ, ದುರಾಸೆ ಮುಂತಾದ ಭಾವನೆಗಳಿಗೆ ಒಳಗಾದ ಪಾತ್ರಗಳನ್ನು ಈ ಪಯಣದಲ್ಲಿ ಸೂಕ್ಷ್ಮವಾಗಿ ಹೇಳಾಗಿದೆ. ‘ಮಾರಿಗಲ್ಲು’ ಮೂಲಕ ರಂಗಾಯಣ ರಘು, ಗೋಪಾಲ್ ಕೃಷ್ಣ ದೇಶಪಾಂಡೆ ವೆಬ್ ಸೀರಿಸ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರಪ್ರಥಮ ಬಾರಿಗೆ ಈ ಇಬ್ಬರು ವೆಬ್ ಸೇರೀಸ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ಕುತೂಹಲ ಹೆಚ್ಚಿಸಿದೆ ಪ್ರವೀಣ್ ತೇಜ್ ಪಾತ್ರವರ್ಗದಲ್ಲಿದ್ದಾರೆ. ಇವರೊಂದಿಗೆ ಜೀ ಕನ್ನಡದ ಹಿಟ್ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಎಎಸ್ ಸೂರಜ್, ನಟ ಪ್ರಶಾಂತ್ ಸಿದ್ದಿ ಅಭಿನಯಿಸಿದ್ದಾರೆ. ಇವರಿಬ್ಬರು ಮೂಲತಃ ಶಿರಸಿಯವರಾಗಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚು ಮಾಡಿದೆ. ಟಿವಿ ಲೋಕದಲ್ಲಿ ಖ್ಯಾತಿ ಪಡೆದಿರುವ ನಿನಾದ್ ಹೃತ್ಸಾ ಮಾರಿಗಲ್ಲು ಭಾಗವಾಗಿದ್ದಾರೆ. ಸ್ಥಳೀಯ ರಂಗಭೂಮಿ ಕಲಾವಿದರು ವೆಬ್ ಸೀರೀಸ್ ನಲ್ಲಿ ನಟಿಸಿದ್ದಾರೆ. ಅನುಭವಿ ತಾರಾಬಳಗದ ಜೊತೆಗೆ ಹೊಸ ಪ್ರತಿಭೆಗಳಿಗೆ ವೆಬ್ ಸರಣಿಯಲ್ಲಿ ಅವಕಾಶ ನೀಡಲಾಗಿದೆ.

 

Leave a Reply

Your email address will not be published. Required fields are marked *

error: Content is protected !!