ಉದಯವಾಹಿನಿ, ಧಾರವಾಡ : ಡಿಸೆಂಬರ್ 8ಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭವಾಗುತ್ತೆ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿವೇಶನ ಕುರಿತು ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಮುಂದಿನ ವಾರ ಬೆಳಗಾವಿ ಡಿಸಿಯೊಂದಿಗೆ ಸಭೆ ಮಾಡುತ್ತೇನೆ. ಯಾವೊಬ್ಬ ಶಾಸಕರು ಉತ್ತರ ಕರ್ನಾಟಕದ ಬಗ್ಗೆ ಮಾತನಾಡಲ್ಲ. ಇರೋವರೆಗೂ ಪ್ರಜಾಪ್ರಭುತ್ವದಲ್ಲಿ ಕೇಳೋದು ತಪ್ಪು ಅನಿಸುತ್ತೆ. ಕಾಲ ಸುಧಾರಣೆ ಮಾಡಬೇಕಿದೆ, ನಮ್ಮಿಂದ ಸುಧಾರಣೆ ಆಗಲ್ಲ. ಪ್ರಶ್ನೆ ಕೇಳಿದ ಶಾಸಕರೇ ಒಂದು ನಿಮಿಷದಲ್ಲಿ ಓಡಿ ಹೋಗುತ್ತಾರೆ ಎಂದಿದ್ದಾರೆ.
