ಉದಯವಾಹಿನಿ, ಜನಪ್ರಿಯ ಹಾಸ್ಯ ನಟ ಸತೀಶ್ ಶಾ (74) ಅವರು ಶನಿವಾರ ನಿಧನರಾದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಟ ಸತೀಶ್ ಶಾ ಅವರ ನಿಧನ ಸುದ್ದಿಯನ್ನು ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಅವರು ದೃಢಪಡಿಸಿದ್ದಾರೆ. ‘ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ. ನಮ್ಮ ಸ್ನೇಹಿತ ಮತ್ತು ನಟ ಸತೀಶ್ ಶಾ ಇಂದು ಮಧ್ಯಾಹ್ನ 2:30 ರ ಸುಮಾರಿಗೆ ಮೂತ್ರಪಿಂಡ ವೈಫಲ್ಯದಿಂದ ನಿಧನರಾದರು ಎಂದು ನಾನು ಹೇಳಲು ಬಯಸುತ್ತೇನೆ. ಅವರು ಮನೆಯಲ್ಲಿದ್ದಾಗ ಆರೋಗ್ಯ ಹದಗೆಟ್ಟಿತು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಬದುಕಲು ಸಾಧ್ಯವಾಗಲಿಲ್ಲ. ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ. ಇದು ಸಿನಿಮಾರಂಗಕ್ಕೆ ಬಹಳ ದೊಡ್ಡ ನಷ್ಟ. ನಾನು ಅವರೊಂದಿಗೆ ಅನೇಕ ಯೋಜನೆಗಳಲ್ಲಿ ಕೆಲಸ ಮಾಡಿದ್ದೇನೆ. ಪಿಯೂಷ್ ಪಾಂಡೆ ಅವರ ಅಂತ್ಯಕ್ರಿಯೆ ಮುಗಿಸಿ ಹಿಂತಿರುಗುತ್ತಿದ್ದಾಗ, ಸತೀಶ್ ಅವರ ನಿಧನದ ವಾರ್ತೆ ತಿಳಿಯಿತು’ ಎಂದು ಅಶೋಕ್ ಪಂಡಿತ್ ತಿಳಿಸಿದ್ದಾರೆ.
