ಉದಯವಾಹಿನಿ , ಬೆಂಗಳೂರು: ಪುಷ್ಪ ಸಿನಿಮಾದಲ್ಲಿ ರಕ್ತಚಂದನ ಸ್ಮಗ್ಲಿಂಗ್ ಹೇಗೆಲ್ಲಾ ಮಾಡ್ತಾರೆ ಅಂತಾ ನೋಡಿರುತ್ತೀರಿ. ಇದನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಖತರ್ನಾಕ್ ಶ್ರೀಗಂಧ ಕಳ್ಳರು ಈರುಳ್ಳಿ ಮೂಟೆಯಲ್ಲಿ ಶ್ರೀಗಂಧ ಸಾಗಿಸಿ ಲಾಕ್ ಆಗಿದ್ದಾರೆ.ಈರುಳ್ಳಿ ಮೂಟೆಗಳನ್ನ ಸಾಗಿಸುತ್ತಿದ್ದ ವ್ಯಾನ್ ಪರಿಶೀಲನೆ ನಡೆಸಿದ ಪೊಲೀಸರೇ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಯಾಕಂದ್ರೆ ಖತರ್ನಾಕ್ ಕಳ್ಳರು ಈರುಳ್ಳಿ ಮೂಟೆಯಲ್ಲಿ ಶ್ರೀಗಂಧ ಸಾಗಿಸುತ್ತಿದ್ದರು. ಪುಷ್ಪಾ ಸಿನಿಮಾ ಸ್ಟೈಲ್‌ ರೀತಿಯಲ್ಲೇ ಶ್ರೀಗಂಧದ ಮರದ ತುಂಡುಗಳನ್ನ ಚೀಲದ ಅಡಿಯಲ್ಲಿ ಹಾಕಿ ಮೇಲೆ ಈರುಳ್ಳಿ ತುಂಬಿ ಸಾಗಿಸಲಾಗುತ್ತಿತ್ತು. ಆಂಧ್ರಪ್ರದೇಶದ ಕರ್ನೂಲ್‌ನಿಂದ ಬೆಂಗಳೂರಿಗೆ ಶ್ರೀಗಂಧವನ್ನ ತಂದು ಇನ್ನೇನು ಡೆಸ್ಟಿನೇಷನ್‌ಗೆ ರೀಚ್ ಆಗಬೇಕು ಅನ್ನುವಷ್ಟರಲ್ಲಿ ನಾಕಾಬಂದಿ ಹಾಕಿ ತಪಾಸಣೆ ಮಾಡುತ್ತಿದ್ದ ಸಿದ್ದಾಪುರ ಪೊಲೀಸರಿಗೆ ಶ್ರೀಗಂಧದ ಮರಗಳ ಸಮೇತ ನಾಲ್ವರು ಲಾಕ್ ಆಗಿದ್ದಾರೆ. ಇದನ್ನೂ ಓದಿ: ಪ್ರೀತಿಸುವಂತೆ ಫ್ಯಾಷನ್ ಡಿಸೈನರ್‌ಗೆ ಕಿರುಕುಳ – ಇವಿಪಿ ಫಿಲ್ಮ್ ಸಿಟಿ ಮಾಲೀಕನ ವಿರುದ್ಧ ಎಫ್‍ಐಆರ್

ಸಿರಾಜ್ ಎಂಬಾತ ತನ್ನ ಗ್ಯಾಂಗ್‌ನೊಂದಿಗೆ ಆಂಧ್ರದ ಕರ್ನೂಲ್ ಕಾಡುಗಳಲ್ಲಿ ಶ್ರೀಗಂಧ ಕಡಿದು ಈರುಳ್ಳಿ ಮಾರಾಟಗಾರರ ವೇಷದಲ್ಲಿ ಬೆಂಗಳೂರಿಗೆ ತಂದು ಇಲ್ಲಿಂದ ಚೀನಾಗೆ ಸಪ್ಲೈ ಮಾಡುತ್ತಿದ್ದ. ಸಿದ್ಧಾಪುರ ಪೊಲೀಸರು ನಾಕಾಬಂದಿ ಹಾಕಿ ಪರಿಶೀಲನೆ ನಡೆಸಿದಾಗ ಈರುಳ್ಳಿ ಮೂಟೆಗಳಲ್ಲಿ 18 ಶ್ರೀಗಂಧದ ಮರದ ತುಂಡುಗಳ ಬ್ಯಾಗ್ ಜಪ್ತಿಯಾಗಿದೆ. ಆಂಧ್ರದ ಸಿರಾಜ್ ತನ್ನ ಗ್ಯಾಂಗ್ ಸದಸ್ಯರೊಂದಿಗೆ ಶ್ರೀಗಂಧ ಕಡಿದು, ಅಕ್ರಮವಾಗಿ ಖರಿದಿ ಮಾಡಿ ಬೆಂಗಳೂರಿನ ಡೀಲರ್‌ಗೆ ತಲುಪಿಸಿ ಬಳಿಕ ಚೀನಾಗೆ ತಲುಪಿಸುತ್ತಿದ್ದರು. ಈ ಸಂಬಂಧ ಶೇಖ್ ಶಾರೂಕ್, ಶೇಖ್ ಅಬ್ದುಲ್, ಪರಮೇಶ್, ರಾಮ್ ಭೂಪಾಲ್ ಎಂಬ ನಾಲ್ವರು ಶ್ರೀಗಂಧ ಸ್ಮಗ್ಲರ್ಸ್ಗಳನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!