ಉದಯವಾಹಿನಿ,ಬೆಂಗಳೂರು: “ಅಂಬುಜ” ನೀವೆಂದೂ ಕೇಳಿರದ, ನಿಮ್ಮನ್ನು ಬೆಚ್ಚಿಬೀಳಿಸುವ ವಿಚಿತ್ರ ಕಥಾಹಂದರ ಹೊಂದಿರುವ ಚಿತ್ರ. ಎಸ್ ಈ ಹಿಂದೆ ಥೀಮ್ ಪೋಸ್ಟರ್ ಮೂಲಕವೇ ಬಹಳಷ್ಟು ಕುತೂಹಲ ಹುಟ್ಟುಹಾಕಿದ್ದ ಅಂಬುಜ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಚಿತ್ರದ ಮೇಲಿನ ಕ್ಯೂರಿಯಾಸಿಟಿಯನ್ನ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಸಿನೆಮಾ ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಒಂದು ವಿಚಿತ್ರ ಕ್ರೈಮ್ ನ ಕುರಿತು ಮಾಡಿರುವ ಚಿತ್ರದಲ್ಲಿ ಕಾಮಿಡಿ, ಲವ್, ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ಜೊತೆಗೆ ಮುಖ್ಯವಾಗಿ ಎಮೋಷನ್ ತುಂಬಾ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇದು ಈಗಷ್ಟೇ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಇದು ಎದ್ದುಕಾಣ್ತಿದೆ. ಶ್ರೀನಿಹನುಮಂತರಾಜು ಅವರ ನಿರ್ದೇಶನದಲ್ಲಿ,ಕಾಶಿನಾಥ್ ಮಡಿವಾಳರ್ ಕಥೆ ಮತ್ತು ಸಾಹಿತ್ಯ ಬರೆದು ನಿರ್ಮಾಣದ ಜವಾಬ್ದಾರಿ ಹೊತ್ತಿರುವ ನೈಜ ಘಟನೆಯಾಧಾರಿತ ಅಂಬುಜ ಸಿನೆಮಾದ ಟ್ರೈಲರ್ ನೋಡಿದ್ರೆ ಸಿನೆಮಾ ಮೇಲಿನ ಭರವಸೆ ಮತ್ತು ಕುತೂಹಲ ಇಮ್ಮಡಿಯಾಗೋದು ಖಂಡಿತ.
ತಾಯಿ ಮಗಳ ಸೆಂಟಿಮೆಂಟ್,ಕಿಡ್ನ್ಯಾಪ್ , ಕೊಲೆ, ಇನ್ವೆಷ್ಟಿಗೇಷನ್, ಹೀಗೆ ಸಾಕಷ್ಟು ವಿಚಾರಗಳ ಎಳೆ ಬಿಟ್ಟುಕೊಟ್ಟಿರುವ ಟ್ರೈಲರ್ ಜಲಕ್ ನಲ್ಲಿ ಹಿನ್ನಲೆ ಸಂಗೀತ ದೊಂದಿಗೆ ಬದಲಾಗೋ ಸನ್ನಿವೇಷ, ಪಾತ್ರಗಳ ಜಲಕ್ ಮೈ ಜುಮ್ಮೆನಿಸುವಂತೆ ಮಾಡುತ್ತದೆ. ಚಿತ್ರದ ಕಥೆ-ಸಾಹಿತ್ಯ-ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ಕಾಶೀನಾಥ್ ಡಿ ಮಡಿವಾಳರ್ ಅವರಿಗೆ ಇದು ಮೊದಲ ಚಿತ್ರವಾಗಿದ್ದು, ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿಯೂ ಅಭಿನಯಿಸಿದ್ದಾರೆ. ಸಹ ನಿರ್ಮಾಪಕರಾಗಿ ಲೋಕೇಶ್ ಭೈರವ ಮತ್ತು ಶಿವಪ್ರಕಾಶ್ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ ಅದ್ಭುತ ಸಂಗೀತವನ್ನು ಪ್ರಸನ್ನಕುಮಾರ್ ಎಮ್.ಎಸ್ ಅವರು ನೀಡಿದ್ದಾರೆ. ಹಿನ್ನೆಲೆ ಸಂಗೀತ ತ್ಯಾಗರಾಜ ಎಮ್.ಎಸ್ ಅವರು ವಿಶಿಷ್ಠವಾಗಿ ಸಂಯೋಜಿಸಿದ್ದಾರೆ. ಮುರುಳೀಧರ್ ಎನ್ ಅವರ ಅದ್ಭುತವಾದ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ವಿಜಯ್.ಎಮ್.ಕುಮಾರ್ ಅವರ ಸಂಕಲನ, ಭಜರಂಗಿ ಮೋಹನ್ ಮತ್ತು ಗೀತಾ ಸೈ ಅವರ ಕಣ್ಮನ ಸೆಳೆಯುವ ಕೋರಿಯೋಗ್ರಫಿ ಚಿತ್ರದಲ್ಲಿ ಇರಲಿದೆ. ಚಿತ್ರದ ಹಾಡುಗಳು ಸಹ ಚಂದವಾಗಿದ್ದು, ಬಿ.ಜಯಶ್ರೀ,ಅನುರಾಧಭಟ್, ಎಮ್.ಡಿ.ಪಲ್ಲವಿ, ಬೇಬೀ ಆಕಾಂಕ್ಷ, ರಾಜೇಶ್ ಕೃಷ್ಣನ್, ಮಯೂರ್ ಅಂಬೆಕಲ್ಲು ಚಿತ್ರದ ಮಧುರವಾದ ಹಾಡಿಗಳಿಗೆ ಧ್ವನಿಯಾಗುವ ಮೂಲಕ ಜೀವ ನೀಡಿದ್ದಾರೆ.
ಅಷ್ಟೇ ಅಲ್ಲ ಅಂಬುಜ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿದ್ದು,ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ಮಗಳು,ತಾಯಿಗೆ ಲಾಲಿಹಾಡನ್ನು ಹಾಡಿದ್ದಾರೆ. ಹಾಗು ಭಾರತದಲ್ಲೇ ಮೊದಲ ಬಾರಿಗೆ “ಎತ್ತಿನಭುಜ” ಎಂಬ ಸುಂದರ ಮತ್ತು ಭಯಾನಕ ಜಾಗದಲ್ಲಿ ಚಿತ್ರೀಕರಣ ಮಾಡಿದ ಮೊದಲ ಸಿನಿಮಾ “ಅಂಬುಜ”ಎಂಬ ಹೆಗ್ಗಳಿಕೆ ಎನ್ನುತ್ತೆ ಚಿತ್ರತಂಡ.
ಚಿತ್ರದಲ್ಲಿ ಬಳಸಿರುವ ಲಂಬಾಣಿ ಕಾಸ್ಟ್ಯೂಮ್ ಸುಮಾರು 25kg ಯಷ್ಟು ತೂಕವಿದ್ದು, ಭಾರತದ ವಿಶಿಷ್ಟವಾದ ಕಾಸ್ಟ್ಯೂಮ್ ಇದಾಗಿದೆ.ಹಾಗು ಚಿತ್ರದ ಮೇಕಿಂಗ್, ಸಂಗೀತ, ಚಿತ್ರದ ಗ್ರೇಡಿಂಗ್ ನಲ್ಲು ಹೊಸತನವನ್ನು ತೋರಿಸಲಾಗಿದ್ದು, ಮಹಿಳಾ ಪ್ರಧಾನ ಚಿತ್ರವಾಗಿದೆ. ಎಲ್ಲಾ ಕಲಾವಿದರ ಅಭಿನಯ ಮನಸೂರೆಗೊಳ್ಳುವಂತಿದೆ.’ಅಂಬುಜ’ ಕ್ರೈಮ್ ಥ್ರಿಲ್ಲರ್ ಡ್ರಾಮಾ ಕಥೆಯನ್ನು ಹೊಂದಿದ್ದು, ಸಮಾಜದಲ್ಲಿ ಕ್ರೈಮ್ ಹೇಗೆ ಬೆಳೆಯುತ್ತಿದೆ ಎಂಬುದನ್ನು ಈವರೆಗೂ ಯಾರೂ ಹೇಳದ ವಿಭಿನ್ನವಾಗಿ ಹೇಳುವ ಪ್ರಯತ್ನದ ಟ್ರೈಲರ್ ಸಧ್ಯಕ್ಕೆ ರೋಮಾಂಚನ ಗೊಳಿಸುತ್ತಿದ್ದು, ಪ್ರೇಕ್ಷಕರ ಗುಡ್ ಕಮೆಂಟ್ ಹಾಗು ಸಿನೆಮಾ ನೋಡುವ ಕಾತುರತೆಗೆ ಕಾರಣವಾಗ್ತಿದೆ.
