ಉದಯವಾಹಿನಿ, ಚಿಕ್ಕಬಳ್ಳಾಪುರ: ಬೈಕ್ ಹಾಗೂ ಸ್ಕೂಟಿಗೆ ಟೊಮೆಟೊ ತುಂಬಿದ ಟೆಂಪೊ ಡಿಕ್ಕಿ ಹೊಡೆದು ದಂಪತಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾಚಹಳ್ಳಿ ಬಳಿ ನಡೆದಿದೆ. ಶ್ಯಾಮಲಾ (35) ಮತ್ತು ಶ್ರೀರಾಮ್ (40) ಮೃತ ದಂಪತಿ. ಘಟನೆಯಲ್ಲಿ ದಂಪತಿಯ ಮೂವರು ಮಕ್ಕಳು ಗಾಯಗೊಂಡಿದ್ದು, ಈ ಪೈಕಿ ಒಂದು ಮಗು ಗಂಭೀರವಾಗಿ ಗಾಯಗೊಂಡಿದೆ. ಸದ್ಯ ಮಕ್ಕಳನ್ನು ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಲಾರ ಕಡೆಯಿಂದ ಚಿಂತಾಮಣಿ ಕಡೆಗೆ ದಂಪತಿ ಪ್ರತ್ಯೇಕ ವಾಹನದಲ್ಲಿ ಬರುತ್ತಿದ್ದರು. ಒಂದು ಮಗುವಿನ ಜೊತೆ ಶ್ಯಾಮಲ ಸ್ಕೂಟಿಯಲ್ಲಿ ಹಾಗೂ ಇಬ್ಬರು ಮಕ್ಕಳೊಂದಿಗೆ ಶ್ರೀರಾಮ್ ಬೈಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ಮುಂಭಾಗದಿಂದ ಬಂದ ಟೊಮೆಟೊ ತುಂಬಿದ ಟೆಂಪೊ ಸ್ಕೂಟಿ ಹಾಗೂ ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶ್ಯಾಮಲ ಮತ್ತು ಶ್ರೀರಾಮ್ ಟೆಂಪೊ ಅಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರು ಮಕ್ಕಳಿಗೆ ಗಾಯಗಳಾಗಿದ್ದು, ಈ ಪೈಕಿ ಒಂದು ಮಗುವಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಮಕ್ಕಳನ್ನು ಕೋಲಾರದ ಎಸ್​ಎನ್​ಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!