ಉದಯವಾಹಿನಿ, ಬಿಗ್ ಬಾಸ್ ಮನೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇವೆ. ಈ ಸಲ ನಿರೀಕ್ಷೆ ಮಾಡಿರೋದು ಇರೋದೇ ಇಲ್ಲ. ಇದೇ ಅಲ್ವೇ ಈ ಬಾರಿಗೆ ಟ್ಯಾಗ್ ಲೈನ್. ಆ ರೀತಿನೇ ಐದು ಜನರನ್ನ ಮನೆಗೆ ಕಳಿಸಿದ ಬಿಗ್ ಬಾಸ್, ವೈಲ್ಡ್ ಕಾರ್ಡ್ ಮೂಲಕ ಮೂವರನ್ನ ಒಳಗೆ ಬಿಟ್ಟಿದ್ದಾರೆ. ಆದರೆ, ಇದೀಗ ಹೊಸ ಸುದ್ದಿ (Latest News) ಒಂದು ಹರಿದಾಡುತ್ತಿದೆ. ಉತ್ತರ ಕರ್ನಾಟಕದ ಮಲ್ಲಮ್ಮ ಮನೆಗೆ ಹೋದರು ಅನ್ನೋದೆ ಈಗೀನ ಈ ಸುದ್ದಿ ಆಗಿದೆ. ಇದಕ್ಕೆ ಕಾರಣ ಏನೂ ಅನ್ನೋದು ಕೂಡ ವೈರಲ್ ಆಗಿದೆ.
ದೊಡ್ಮನೆಯಿಂದ ಮಲ್ಲಮ್ಮ ಮನೆಗೆ ಹೋಗಿಯೇ ಬಿಟ್ಟರು ಅನ್ನುವ ಸುದ್ದಿ ಇದೆ. ಆದರೆ, ಅಧಿಕೃತ ಮಾಹಿತಿ ಬಂದಿಲ್ಲ. ಈ ಕುರಿತಾದ ಪ್ರೋಮೋ ಕೂಡ ರಿಲೀಸ್ ಆಗಿಲ್ಲ. ಆದರೆ, ಒಂದು ವಿಷಯ ಹರಿದಾಡುತ್ತಿದೆ. ಮಲ್ಲಮ್ಮ ಮನೆಯಿಂದ ಹೋಗಿರೋದು ಗೊತ್ತಾಗುತ್ತದೆ. ಅದು ಗುರುವಾರದ ಸಂಚಿಕೆಯಲ್ಲಿಯೇ ತಿಳಿಯುತ್ತದೆ ಅನ್ನೋದೇ ಸದ್ಯ ಇರೋ ವೈರಲ್ ಸುದ್ದಿ ಆಗಿದೆ. ಮಲ್ಲಮ್ಮ ಯಾಕ್ ಹೋದ್ರು? ಮಲ್ಲಮ್ಮ ಮನೆಯಿಂದ ಹೋಗಿದ್ಯಾಕೆ ಅನ್ನೋ ಪ್ರಶ್ನೆ ಇದೆ. ಇದಕ್ಕೆ ವೈಯುಕ್ತಿಕ ಕಾರಣಗಳಿಂದಲೇ ಈ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಕುಟುಂಬದ ಮನೆಯವರಲೊಬ್ಬರಿಗೆ ಮಗು ಆಗಿದೆ.ಈ ಹಿನ್ನೆಲೆಯಲ್ಲಿ ಮಲ್ಲಮ್ಮ ಮನೆಗೆ ಹೋಗಲೇಬೇಕಿದೆ. ಅದಕ್ಕೇನೆ ಮಲ್ಲಮ್ಮ ದೊಡ್ಮನೆಯಿಂದ ತಮ್ಮ ಮನೆಗೆ ಹೋಗಿದ್ದಾರೆ ಅನ್ನುವ ನ್ಯೂಸ್ ಇದೆ.
