ಉದಯವಾಹಿನಿ, ನವದೆಹಲಿ: ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆಯನ್ನು ಹೊಂದಿರುವ ಹೊರತಾಗಿಯೂ ಮುಂಬೈ ಬ್ಯಾಟ್ಸ್‌ಮನ್ ಸರ್ಫರಾಝ್ ಖಾನ್ ( ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ನೀಡದ ಬಗ್ಗೆ ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಸರ್ಫರಾಝ್ ಖಾನ್ ಅವರನ್ನು ಕೈ ಬಿಡಲಾಗಿತ್ತು. ನಂತರ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ತವರು ಟೆಸ್ಟ್ ಸರಣಿಯ ಭಾರತ ತಂಡದಲ್ಲಿಯೂ ಅವಕಾಶ ನೀಡಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಬಿಸಿಸಿಐ ಆಯ್ಕೆದಾರರನ್ನು ಟೀಕಿಸಿದ್ದರು.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಧನಿ ಎತ್ತಿದ ಶಶಿ ತರೂರ್, ಅಂತಾರಾಷ್ಟ್ರೀಯ ಕ್ರಿಕೆಟ್ ಅಲ್ಪ ವೃತ್ತಿ ಜೀವನದಲ್ಲಿ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿರುವ ಹೊರತಾಗಿಯೂ ಸರ್ಫರಾಝ್ ಖಾನ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಿಲ್ಲ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಬಹುದು. ಈ ವೇಳೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಸರ್ಫರಾಝ್ ವಿಶ್ವಾಸವನ್ನು ಹೊಂದಿದ್ದಾರೆ. ಇದು ನಿಜಕ್ಕೂ ಆಕ್ರೋಶದ ಸಂಗತಿ. ಸರ್ಫರಾಝ್ ಖಾನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 65ಕ್ಕೂ ಹೆಚ್ಚಿನ ಸರಾಸರಿಯನ್ನು ಹೊಂದಿದ್ದಾರೆ. ತಮ್ಮ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ 50 ರನ್ ಮತ್ತು ಭಾರತ ಸೋತ ಟೆಸ್ಟ್‌ನಲ್ಲಿ 150 ರನ್ ಗಳಿಸಿದ್ದಾರೆ, ಇಂಗ್ಲೆಂಡ್‌ನಲ್ಲಿ ತಮ್ಮ ಏಕೈಕ ಪ್ರವಾಸದ ಪಂದ್ಯದಲ್ಲಿ 92 ರನ್ ಗಳಿಸಿದ್ದಾರೆ (ಭಾರತ ಟೆಸ್ಟ್ ತಂಡದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಶತಕ). ಆದರೂ ಅವರನ್ನು ಇನ್ನೂ ಆಯ್ಕೆದಾರರ ಚೌಕಟ್ಟಿನಿಂದ ಹೊರಗಿಡಲ್ಪಟ್ಟಿದ್ದಾರೆ,” ಎಂದು ತರೂರ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಸರ್ಫರಾಜ್ ಖಾನ್ ಇದುವರೆಗೂ ಆರು ಟೆಸ್ಟ್ ಪಂದ್ಯಗಳಿಂದ 37.10ರ ಸರಾಸರಿಯಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 371 ರನ್ ಗಳಿಸಿದ್ದಾರೆ. ಅವರು 57 ಪ್ರಥಮ ದರ್ಜೆ ಪಂದ್ಯಗಳಿಂದ 64.32ರ ಸರಾಸರಿಯಲ್ಲಿ 16 ಶತಕ ಮತ್ತು 15 ಅರ್ಧಶತಕಗಳೊಂದಿಗೆ 4760 ರನ್ ಗಳಿಸುವ ಮೂಲಕ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ.
