ಉದಯವಾಹಿನಿ, ತುಮಕೂರು: ವಿದ್ಯಾರ್ಥಿಗಳು ಪರಿಶ್ರಮ ಪ್ರಯತ್ನ ಇದ್ದರೆ ಎಂತಹ ಗುರಿಯನ್ನು ಸಾಧಿಸಬಹುದು ತುಮಕೂರು ಜಿಲ್ಲೆಯ ಎಲ್ಲಾ ಸಿ.ಎ. ಇನ್ಸಟರ್ ಹಾಗೂ ಸಿ.ಎ. ಪೈನಲ್ ವಿದ್ಯಾರ್ಥಿಗಳಿಗೆ ಉತ್ತಮ ಮಟ್ಟದ ತರಬೇತಿ ತರಗತಿಗಳನ್ನು ನಮ್ಮ ಸಂಸ್ಥೆಯಲ್ಲಿ ಬೆಂಗಳೂರಿನ ಯಶಸ್ ಅಕಾಡೆಮಿ ಸಹಯೋಗದೊಂದಿಗೆ ನಮ್ಮ ಕಾಲೇಜಿನಲ್ಲಿ ತರಬೇತಿ ನೀಡುವ ಭರವಸೆಯನ್ನು ಅನನ್ಯ ಸಂಸ್ಥೆಯ ಅಧ್ಯಕ್ಷರಾದ ಚಾರ್ಟರ್ಡ್ ಅಕೌಂಟೆಂಟ್ ಎಸ್.ವಿಶ್ವನಾಥ್‌ರವರು ತಿಳಿಸಿದರು. ನಗರದ ಅನನ್ಯ ಇನ್ಸಿಟ್ಯೂಟ್  ಅಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್‌ನ ವತಿಯಿಂದ ಸಿ.ಎ.ಫೈನಲ್ ಹಾಗೂ ಸಿ.ಎ. ಇನ್‌ಟರ್‌ನಲ್ಲಿ ಉತ್ತೀರ್ಣರಾದಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಹಾಗೂ ಅಭಿನಂದಿಸುವ ಕಾರ್ಯಕ್ರಮವನ್ನು ಜುಲೈ ೧೦ ರಂದು ಸೋಮವಾರ ಬೆಳಿಗ್ಗೆ ೧೦ ಗಂಟೆಗೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ತುಮಕೂರಿನ ಪ್ರಸಿದ್ಧ ಮನೋಶಾಸ್ತ್ರಜ್ಞನರಾಸದ  ಸಿ.ಸಿ.ಪಾವಟೆರವರು ಮಾತನಾಡುತ್ತಾ ಸತತ ಪ್ರಯತ್ನ, ಏಕಾಗ್ರತೆ ಚಿತ್ತತೆ, ಸಮಯ ಪ್ರಜ್ಞೆ, ಸಾಧಿಸುವ ಛಲ, ಉತ್ತಮ ನಿರ್ಣಯ ಇವೆಲ್ಲಾ ಮನುಷ್ಯನನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ ಎಂದು ತಿಳಿಸಿದರು.

ಸಿ.ಎ. ಪೈನಲ್ ಉತ್ತೀರ್ಣರಾದ ಕು.ಸಂಹಿತ ಕೆ.ಎನ್., ನಾಗಶ್ರೇಯಸ್, ಕು.ಶ್ವೇತಾ, ಕು.ಅವನಿ ಶಶಿಧರ್, ಮತ್ತು ಸಿ.ಎ. ಇನ್‌ಟರ್‌ನಲ್ಲಿ ತೇಗಡೆ ಹೊಂದಿದ ದಿನೇಶ್ ಎನ್. ಇವರುಗಳು ಸಿ.ಎ.ಉತ್ತೀರ್ಣರಾಗಲು ತಾಳ್ಮೆ, ಪೋಷಕರ ಉಪನ್ಯಾಸಕರು ಸಹಕಾರ, ಸತತ ಪ್ರಯತ್ನ ಸೋತರು ಕಂಗೆಡದೆ ತಮ್ಮಲ್ಲಿ ತಾವುಗಳು ವಿಶ್ವಾಸವಿಟ್ಟು ಓದಿದರೆ ಸಿ.ಎ. ಪರೀಕ್ಷೆಯನ್ನು ಉತ್ತೀರ್ಣರಾಗಬಹುದು ಎಂದು ತಿಳಿಸಿದರು. ಅನನ್ಯ ಇನ್ಸಿಟ್ಯೂಟ್ ಅಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್‌ನಲ್ಲಿ ತರಬೇತಿ ಪಡೆಯುವುದಕ್ಕೆ ಧನ್ಯವಾದಗಳನ್ನು ತಿಳಿಸಿದರು. ಸಿ.ಎ. ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಸಂದೇಶವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಸಿ.ಎ. ಫೈನಲ್ ಹಾಗೂ ಇನ್‌ಟರ್‌ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿತ್ತು. ಅನನ್ಯ ಸಂಸ್ಥೆಯ ಟ್ರಸ್ಟಿಯಾದ ಡಾ.ಹೆಚ್.ಹರೀಶ್, ಅನನ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ವಿಶ್ವಾಸ್, ಬೆಂಗಳೂರಿನ ಯಶಸ್ ಅಕಾಡೆಮಿ ತರಬೇತುದಾರರಾದ ಶಶಿಕಿರಣ್, ಕಾರ್ಯಕ್ರಮವನ್ನು ಶ್ರೀಮತಿ ಅನಂತಲಕ್ಷಿ ನಡೆಸಿಕೊಟ್ಟರು. ಸಂಸ್ಥೆಯ ಬೋಧಕ ಬೋಧಕೇತರ ಸಿಬ್ದಂದಿ ವರ್ಗದವರು ಹಾಗೂ ಸಿ.ಎ. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಗರದ ಅನನ್ಯ  ಇನ್ಸಿಟ್ಯೂಟ್  ಅಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್‌ನ ವತಿಯಿಂದ ಸಿ.ಎ. ಫೈನಲ್ ಹಾಗೂ ಸಿ.ಎ. ಇನ್‌ಟರ್‌ನಲ್ಲಿ ಉತ್ತೀರ್ಣರಾದಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಹಾಗೂ ಅಭಿನಂದಿಸುವ ಕಾರ್ಯಕ್ರಮವನ್ನು ಜುಲೈ ೧೦ ರಂದು ಸೋಮವಾರ ಬೆಳಿಗ್ಗೆ ೧೦ ಗಂಟೆಗೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಚಿತ್ರದಲ್ಲಿ ಅನನ್ಯ ಸಂಸ್ಥೆಯ ಅಧ್ಯಕ್ಷರಾದ ಚಾರ್ಟರ್ಡ್ ಅಕೌಂಟ್ ಎಸ್.ವಿಶ್ವನಾಥ್, ಸಿ.ಸಿ.ಪಾವಟೆ, ಅನನ್ಯ ಸಂಸ್ಥೆಯ ಟ್ರಸ್ಟಿಯಾದ ಡಾ.ಹೆಚ್.ಹರೀಶ್, ಅನನ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ವಿಶ್ವಾಸ್, ಬೆಂಗಳೂರಿನ ಯಶಸ್ ಅಕಾಡೆಮಿ ತರಬೇತುದಾರರಾದ ಶಶಿಕಿರಣ್, ಅನಂತಲಕ್ಷಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!