ಉದಯವಾಹಿನಿ, ಹುಳಿಯಾರು: ಹುಳಿಯಾರು ಪಟ್ಟಣದಲ್ಲಿನ ಪೊಲೀಸ್ ಕ್ವಾಟ್ರಸ್ ಹಿಂಭಾಗದಲ್ಲೇ ಭಾನುವಾರ ರಾತ್ರಿ ಎರಡು ಮನೆಗಳಲ್ಲಿ ಕಳ್ಳತ ನಡೆದಿದ್ದು ನಗದು, ಒಡವೆ ಕದ್ದೊಯ್ದಿದ್ದಾರೆ.
ಹುಳಿಯಾರು ವಿಜಯನಗರ ಬಡಾವಣೆ, ೬ ನೇ ವಾರ್ಡ್ ಪೊಲೀಸ್ ಸ್ಟೇಷನ್ ಕ್ವಾರ್ಟರ್ಸ್ ಹಿಂಭಾಗ ಇತ್ತೀಚೆಗಷ್ಟೆ ನಿಧನರಾದ ಕಸಾಪ ಮಾಜಿ ಅಧ್ಯಕ್ಷ ತ.ಶಿ.ಬಸವ ಮೂರ್ತಿ ಹಾಗೂ ಟೈಲರ್ ಮೂರ್ತಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಇಬ್ಬರ ಮನೆಯಲ್ಲೂ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು ಈ ಕೃತ್ಯ ಮಾಡಿದ್ದಾರೆ. ಈ ಇಬ್ಬರ ಮನೆಯಲ್ಲೂ ಬೀಗ ಹೊಡೆದು ಒಳ ನುಗ್ಗಿ ಕಳ್ಳತನ ಮಾಡಿದ್ದಾರೆ.

ಮನೆಯ ಒಳ ನುಗ್ಗಿದ ಕಳ್ಳರು ಮನೆಯ ಬೀರುಗಳನ್ನು ಹೊಡೆದು ನಗದು, ಚಿನ್ನಾಭರಣ ದೋಚಿದ್ದಾರೆ. ಬಸವಮೂರ್ತಿ ಅವರ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳಾವುವೂ ಇರಲಿಲ್ಲ. ಮೂರ್ತಿ ಅವರ ಮನೆಯಲ್ಲಿ ೪೦ ಗ್ರಾಂ ಬಂಗಾರ ಹಾಗೂ ೧೫ ಸಾವಿರ ನಗದು ದೋಚಿದ್ದಾರೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯ ಬೀರು ಹೊಡೆಯುವಾಗ ಪಕ್ಕದ ಮನೆಯವರು ಸೌಂಡ್ ಆಗುತ್ತಿರುವುದನ್ನು ಗಮನಿಸಿ ನೆರೆಮನೆಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇದರಿಂದ ಎಚ್ಚೆತ್ತು ಮನೆಗಳಲ್ಲಿ ಲೈಟ್ ಹಾಕಿದ್ದರಿಂದ ಮೂವರು ಕಳ್ಳರು ಸ್ಕೂಟಿಯಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!