ಉದಯವಾಹಿನಿ, ಕನ್ನಡ ನಿರ್ದೇಶಕ ನಂದ ಕಿಶೋರ್ ನಿರ್ದೇಶನ ಮಾಡಿರುವ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಹೀರೋ ಆಗಿ ನಟಿಸಿರುವ ವೃಷಭ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಕ್ರಿಸ್ಮಸ್‌ಗೆ ವೃಷಭ ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ. ಮೋಹನ್ ಲಾಲ್ ಅಭಿನಯದ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ. ತೆಲುಗು ಮತ್ತು ಮಲೆಯಾಳಂ ಭಾಷೆಯಲ್ಲಿಯೇ ಈ ಸಿನಿಮಾ ತಯಾರಾಗಿದೆ. ಆದರೆ, ಪರ ಭಾಷೆಯಲ್ಲಿ ಇದು ಡಬ್ ಆಗುತ್ತಿದೆ. ಈ ಮೂಲಕ ಎಲ್ಲ ಭಾಷೆಯ ಸಿನಿಮಾ ಪ್ರೇಮಿಗಳು ಈ ಚಿತ್ರ ನೋಡಬಹುದು.
ವೃಷಭ ಚಿತ್ರದಲ್ಲಿ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಕೂಡ ಇದ್ದಾರೆ. ಮೋಹನ್ ಲಾಲ್ ಮಗನ ಪಾತ್ರವನ್ನೇ ಮಾಡಿದ್ದಾರೆ. ರಾಗಿಣಿ ದ್ವಿವೇದಿ ಮತ್ತು ನಯನ್ ಸಾರಿಕಾ, ಅಜಯ್ ಮತ್ತು ನೇಹಾ ಸಕ್ಸೇನಾ ತಾರಾಬಳಗದಲ್ಲಿದ್ದಾರೆ. ವೃಷಭ ಚಿತ್ರಕ್ಕೆ ಸ್ಯಾಮ್ ಸಿಎಸ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರೆಸುಲ್ ಪೂಕುಕ್ಯೂ ಸೌಂಡ್ ಡಿಸೈನ್ ಮಾಡಿದ್ದಾರೆ. ಜನಾರ್ಧನ್ ಮಹರ್ಷಿ ಹಾಗೂ ಕಾರ್ತಿಕ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಪೀಟರ್ ಹೈನ್, ಸ್ಟಂಟ್ ಸಿಲ್ವಾ ಹಾಗೂ ನಿಖಿಲ್ ಅವರ ಸಾಹಸ ನಿರ್ದೇಶನವಿದೆ.
