ಉದಯವಾಹಿನಿ, ಕಾಬೂಲ್ : ಹದಗೆಟ್ಟಿರುವ ಪಾಕಿಸ್ತಾನ-ಅಫ್ಘಾನಿಸ್ತಾನ ಸಂಬಂಧ ಸದ್ಯಕ್ಕೆ ಸರಿಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಇಸ್ತಾಂಬುಲ್‌ನಲ್ಲಿ ನಡೆದ ಎರಡು ದೇಶಗಳ ನಡುವಿನ ಮತ್ತೊಂದು ಸುತ್ತಿನ ಶಾಂತಿ ಮಾತುಕತೆ ಮುಕ್ತಾಯವಾಗಿದ್ದು, ಪಾಕಿಸ್ತಾನದ ಅಪ್ರಮಾಣಿಕ ಮತ್ತು ಅಪ್ರಬುದ್ಧ ನಡವಳಿಕೆಯನ್ನು ಅಫ್ಘಾನಿಸ್ತಾನ ಖಂಡಿಸಿದೆ. ಟರ್ಕಿ ಮತ್ತು ಕತಾರ್‌ನ ಮಧ್ಯಸ್ಥಿಕೆ ಪ್ರಯತ್ನಗಳ ಹೊರತಾಗಿಯೂ ಪಾಕಿಸ್ತಾನ ಮಾತುಕತೆಗೆ ಅಡ್ಡಿಯಾಗುತ್ತಿದೆ ಮತ್ತು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಕಿಡಿ ಕಾರಿದೆ. ಜತೆಗೆ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಸಿದ್ಧ ಎಂದು ತಾಲಿಬಾನ್ ಮತ್ತೊಮ್ಮೆ ಘೋಷಿಸಿದೆ. ಆ ಮೂಲಕ ಗಡಿಯಲ್ಲಿ ಉಂಟಾದ ಸಂಘರ್ಷದ ವಾತಾರಣ ಸದ್ಯಕ್ಕೆ ಸಹಜ ಸ್ಥಿತಿಗೆ ಬರುವ ಬಗ್ಗೆ ಅನುಮಾನ ಮೂಡಿದೆ.
ಅಫ್ಘಾನಿಸ್ತಾನದ ಹಿರಿಯ ನಾಯಕ ಜಬಿಹುಲ್ಲಾ ಮುಜಾಹಿದ್ ಈ ಬಗ್ಗೆ ಹೇಳಿಕೆ ನೀಡಿ, ʼʼಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಟರ್ಕಿ ಮತ್ತು ಕತಾರ್ – ಎರಡು ಸಹೋದರ ರಾಷ್ಟ್ರಗಳಿಗೆ ತಾಲಿಬಾನ್ ಸರ್ಕಾರವು ಕೃತಜ್ಞತೆ ಸಲ್ಲಿಸುತ್ತದೆ. ನವೆಂಬರ್ 6 ಮತ್ತು 7ರಂದು ನಡೆದ ಮಾತುಕತೆಯಲ್ಲಿ ಅಫ್ಘಾನ್ ಪ್ರತಿನಿಧಿಗಳು ಭಾಗವಹಿಸಿದ್ದರು. ಪಾಕಿಸ್ತಾನವು ಅಂತಿಮವಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು.
