ಉದಯವಾಹಿನಿ, ವಾಷಿಂಗ್ಟನ್‌: ಬಹಳ ವರ್ಷಗಳ ಹಿಂದೆಯೇ ಸೆಕ್ಸ್‌ ಉದ್ಯಮಕ್ಕೆ ಗುಡ್‌ಬೈ ಹೇಳಿದ ಮಾಜಿ ನೀಲಿತಾರೆ ಲಾನಾ ರೋಡ್ಸ್ ತನ್ನ 400+ ಸೆಕ್ಸ್ ವಿಡಿಯೋಗಳನ್ನ ಪೋರ್ನ್‌ ಸೈಟ್‌ಗಳಿಂದ ಡಿಲೀಟ್‌ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಹೌದು. ಮಾಜಿ ನೀಲಿತಾರೆ ಲಾನಾ ರೋಡ್ಸ್‌, ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ವಿವಿಧ ಪೋರ್ನ್‌ ವೆಬ್‌ಸೈಟ್‌ಗಳಲ್ಲಿರುವ ನನ್ನ 400+ ಸೆಕ್ಸ್‌ ವಿಡಿಯೋಗಳನ್ನ ಶಾಶ್ವತವಾಗಿ ಡಿಲೀಟ್‌ ಮಾಡುವಂತೆ ಕೇಳಿಕೊಂಡಿದ್ದಾರೆ.
ಪ್ರಮುಖವಾಗಿ ವಿಡಿಯೋಗಳನ್ನ ಡಿಲೀಟ್‌ ಮಾಡೋದಕ್ಕೆ ಲಾನಾ 2 ಕಾರಣಗಳನ್ನ ಮುಂದಿಟಟ್ಟಿದ್ದಾರೆ. ಮೊದಲನೆಯದಾಗಿ ತಾನು ಸೆಕ್ಸ್‌ ಉದ್ಯಮಕ್ಕೆ ಬಂದಾಗ ಇನ್ನೂ 19 ವರ್ಷ ವಯಸ್ಸಾಗಿತ್ತು. ಆ ಸಮಯದಲ್ಲಿ ನನಗೆ ಹೆಚ್ಚು ತಿಳಿವಳಿಕೆ ಇರಲಿಲ್ಲ, ಹೆಸರು ಮಾಡಬೇಕು ಅನ್ನೋದಷ್ಟೇ ಉದ್ದೇಶ ಇತ್ತು. ಹಾಗಾಗಿ ಅರಿವಿಲ್ಲದೇ ಈ ಉದ್ಯಮಕ್ಕೆ ಬಂದೆ. ಅದು ಕೆಲ ವರ್ಷಗಳ ಕಾಲ ಮುಂದುವರಿಯಿತು ಅಂತ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!