ಉದಯವಾಹಿನಿ, ಭಿಕ್ಷಾಟನೆಗೆ ಸಂಬಂಧಿಸಿದ ಅಪರಾಧಗಳಿಗಾಗಿ ಸಾವಿರಾರು ಪಾಕಿಸ್ತಾನಿಗಳನ್ನು ಸೌದಿ ಅರೇಬಿಯಾ ಮತ್ತು ಯುಎಇಗಳಿಂದ (UAE) ಗಡೀಪಾರು ಮಾಡಲಾಗಿದೆ. ಇದರ ಬೆನ್ನಲ್ಲೇ ವೃತ್ತಿಪರ ಭಿಕ್ಷುಕರು, ಸರಿಯಾದ ದಾಖಲೆಗಳು ಇಲ್ಲದವರಿಗೆ ಇನ್ನು ಮುಂದೆ ವಿದೇಶಕ್ಕೆ ಹೋಗಲು ಅನುಮತಿ ಇಲ್ಲ ಎಂದು ಪಾಕಿಸ್ತಾನದ ಆಂತರಿಕ ಸಚಿವ ಮೊಕ್ಸಿನ್ ನಖಿ ತಿಳಿಸಿದ್ದಾರೆ.
ಸೌದಿ ಅರೇಬಿಯಾ ಮತ್ತು ಯುಎಇಗಳಿಂದ ಸಾವಿರಾರು ಪಾಕಿಸ್ತಾನಿಗಳನ್ನು ಭಿಕ್ಷಾಟನೆಗೆ ಸಂಬಂಧಿಸಿದ ಅಪರಾಧಗಳಿಗಾಗಿ ಗಡಿಪಾರು ಮಾಡಲಾಗಿದೆ. ಇದು ಮತ್ತೆ ಪುನರಾವರ್ತನೆಯಾದರೆ ರಾಷ್ಟ್ರವನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಎಚ್ಚರಿಸಿದೆ. ಇದರಿಂದ ಭವಿಷ್ಯದಲ್ಲಿ ಪಾಕಿಸ್ತಾನಿ ಪ್ರಜೆಗಳಿಗೆ ಈ ರಾಷ್ಟ್ರಗಳಿಗೆ ಪ್ರವೇಶ ನಿರ್ಬಂಧಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಇದೀಗ ಪಾಕಿಸ್ತಾನದ ಆಂತರಿಕ ಸಚಿವ ಮೊಕ್ಸಿನ್ ನಖಿ ಅವರು ವೃತ್ತಿಪರ ಭಿಕ್ಷುಕರು ಮತ್ತು ಸರಿಯಾದ ಪ್ರಯಾಣ ದಾಖಲೆಗಳು ಇಲ್ಲದವರನ್ನು ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಘನತೆ ಕಾಪಾಡಲು ಮತ್ತು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಖಿ ತಿಳಿಸಿದ್ದಾರೆ.
ಅಕ್ರಮ ಭಿಕ್ಷಾಟನೆ, ವೀಸಾ ನಿಯಮ ಉಲ್ಲಂಘನೆ, ದಾಖಲೆ ವಂಚನೆಯಿಂದಾಗಿ ಅನೇಕ ಪಾಕಿಸ್ತಾನಿಗಳನ್ನು ವಿದೇಶಗಳಲ್ಲಿ ಗಡೀಪಾರು ಮಾಡುವುದು, ಬಂಧಿಸುತ್ತಿರುವುದರಿಂದ ವಿಶ್ವ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಜುಗರ ಉಂಟು ಮಾಡಿದೆ. ವಿದೇಶಗಳಲ್ಲಿ ಪಾಕಿಸ್ತಾನಿ ಪ್ರಜೆಗಳು ಸಂಘಟಿತ ಭಿಕ್ಷಾಟನೆಯಲ್ಲಿ ತೊಡಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳಲ್ಲಿ ಪಾಕಿಸ್ತಾನಿಯರಿಗೆ ನಿಯಮಗಳನ್ನು ಬಿಗಿಗೊಳಿಸಲಾಗುತ್ತಿದೆ.
